ಕರ್ನಾಟಕ

karnataka

ETV Bharat / state

ಬೆಂಗಳೂರಿನ ವಿವಿಧ ಪೊಲೀಸ್​ ಠಾಣೆಗಳಲ್ಲಿ ತುಕ್ಕು ಹಿಡಿಯುತ್ತಿವೆ 38 ಸಾವಿರ ವಾಹನಗಳು! - 38 ಸಾವಿರ ವಾಹನಗಳು ತಕ್ಕು ಹಿಡಿಯುತ್ತಿವೆ

2015ರಿಂದ ಇದುವರೆಗೂ 38,369 ವಾಹನಗಳು ತುಕ್ಕು ಹಿಡಿದಿವೆ. ಈ ವಾಹನಗಳು ಈಗ ಹರಾಜು ಹಾಕಿದ್ರೆ ಹೋಗುತ್ತಾ, ಇಲ್ವಾ? ಅನ್ನೋ ಅನುಮಾನವಿದೆ. ಸದ್ಯ ಪೊಲೀಸರು ಕೋರ್ಟ್ ಆದೇಶಕ್ಕೆ ಕಾಯುತ್ತಿದ್ದು, ಆದಷ್ಟು ಬೇಗ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.

ಪೊಲೀಸ್​ ಠಾಣೆ ಮುಂದೆ ತುಕ್ಕು ಹಿಡಿಯುತ್ತಿರುವ ವಾಹನಗಳು
vehicles get rust in Bangalore Police Stations

By

Published : Jul 11, 2021, 6:19 PM IST

ಬೆಂಗಳೂರು: ಸಂಚಾರಿ ನಿಯಮ‌ ಉಲ್ಲಂಘಿಸಿದ ಮಾಲೀಕರಿಂದ ಪೊಲೀಸರು ವಶಪಡಿಸಿಕೊಂಡ ವಾಹನಗಳೂ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳಿಂದ ಜಪ್ತಿ ಮಾಡಲಾದ ಸುಮಾರು 38 ಸಾವಿರ ವಾಹನಗಳು ತುಕ್ಕು ಹಿಡಿಯುತ್ತಿದೆ. ಮತ್ತೊಂದೆಡೆ, ವಶಕ್ಕೆ ಪಡೆದುಕೊಂಡ ವಾಹನಗಳನ್ನು ನಿಲ್ಲಿಸುವುದಕ್ಕೆ‌ ಜಾಗದ ಅಭಾವವೂ ಎದುರಾಗಿದೆ.

ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ವಾಹನಗಳ ಪರಿಸ್ಥಿತಿ ಹೀಗಿದೆ...

2015ರಿಂದ ಇದುವರೆಗೂ ನಗರದಲ್ಲಿ ಸೀಜ್ ಮಾಡಿದ ವಾಹನಗಳ ಪೈಕಿ 38 ಸಾವಿರ ವಾಹನಗಳನ್ನು ಅವುಗಳ ಮಾಲೀಕರು ಇದುವರೆಗೂ ಬಂದು ಬಿಡಿಸಿಕೊಂಡು ಹೋಗಿಲ್ಲ. ಇದರಿಂದ‌ ಠಾಣಾ ಆವರಣದಲ್ಲಿ ಜಾಗವಿಲ್ಲ ಎಂದು ಮಲ್ಲೇಶ್ವರಂ ಬಳಿಯ ಜಕ್ಕರಾಯನ ಕೆರೆಯಲ್ಲಿ ವಶಕ್ಕೆ ಪಡೆದ ವಾಹನಗಳನ್ನು ನಿಲ್ಲಿಸಲಾಗಿದೆ.

ಸದ್ಯ ವಾಹನಗಳು ತುಕ್ಕು ಹಿಡಿಯುತ್ತಿದ್ದು, ಇನ್ನು ಕೆಲ ತಿಂಗಳು ಬಿಟ್ಟರೆ ಹರಾಜು ಹಾಕಿದರೂ ವ್ಯರ್ಥ ಎನ್ನುವ ಪರಿಸ್ಥಿತಿಗೆ ತಲುಪಿವೆ. ನಗರದ ಹಲವು ಪೊಲೀಸ್ ಠಾಣೆಗಳ ಮಂದೆ ಹೆಚ್ಚಿನ‌ ಸಂಖ್ಯೆಯಲ್ಲಿ ನಿಲ್ಲಿಸಲು ಸ್ಥಳಾವಕಾಶ ಇಲ್ಲದಂತಾಗಿದೆ. ಒಂದು ವೇಳೆ ನಿಗದಿಗಿಂತ ಹೆಚ್ಚು ವಾಹನಗಳನ್ನು ಸ್ಟೇಷನ್ ಮುಂದೆ ನಿಲ್ಲಿಸಿದರೆ ವಾಹನ‌ ಸಂಚಾರಕ್ಕೆ ತೊಡಕಾಗಲಿದೆ.

ತುಕ್ಕು ಹಿಡಿಯುತ್ತಿವೆ ಜಪ್ತಿ ಮಾಡಲಾದ ವಾಹನಗಳು

ವಾಹನಗಳ ಹರಾಜಿಗೆ ಆಯುಕ್ತರ ಸೂಚನೆ :

ಇತ್ತ ಜಕ್ಕರಾಯನ ಕೆರೆ ಬಳಿ ವಾಹನಗಳು ಸಾಲಾಗಿ ನಿಲ್ಲಿಸಿರುವುನ್ನು ನೋಡಿದ ಪೊಲೀಸ್​ ಕಮೀಷನರ್ ಕಮಲ್ ಪಂತ್, ತುಕ್ಕು ಹಿಡಿಯೋ ಹಂತಕ್ಕೆ ಬಂದಿದ್ದರೂ ಯಾಕೆ ವಿಲೇವಾರಿ ಮಾಡಿಲ್ಲ ಎಂದು ಗರಂ ಆಗಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳ ಸಭೆ ಕರೆದು ಸೀಜ್ ಆಗಿ ನಿಂತಿರುವ ವಾಹನಗಳನ್ನು ವಿಲೇವಾರಿ ಮಾಡಿ, ಇಲ್ಲದಿದ್ದರೆ ಕೋರ್ಟ್ ಆದೇಶ ಪಡೆದು ಹರಾಜು ಹಾಕಿ ಎಂದು ಸೂಚಿಸಿದ್ದಾರೆ.‌ ಇದರಿಂದ‌ ಎಚ್ಚೆತ್ತ ಪೊಲೀಸರು, ಈಗ ವಾಹನಗಳನ್ನು ಹರಾಜು ಹಾಕಲು ಅನುಮತಿ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಜಪ್ತಿ ಮಾಡಿರುವ ವಾಹನಗಳು

2015ರಿಂದ ಇದುವರೆಗೂ 38,369 ವಾಹನಗಳು ತುಕ್ಕು ಹಿಡಿದಿವೆ. ಈಗ ಹರಾಜು ಹಾಕಿದ್ರೂ ಹೋಗುತ್ತಾ, ಇಲ್ವಾ? ಅನ್ನೋ ಅನುಮಾನವಿದೆ. ಸದ್ಯ ಪೊಲೀಸರು ಕೋರ್ಟ್ ಆದೇಶಕ್ಕೆ ಕಾಯುತ್ತಿದ್ದು, ಆದಷ್ಟು ಬೇಗ ಹರಾಜು ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.

ತುಕ್ಕು ಹಿಡಿಯುತ್ತಿರುವ ಜಪ್ತಿ ಮಾಡಿರುವ ವಾಹನಗಳು

ವಿಲೇ ಆಗದೆ ಉಳಿದುಕೊಂಡಿರುವ ವಾಹನಗಳ ವರ್ಷವಾರು ಮಾಹಿತಿ ಹೀಗಿದೆ..

  • 2015 -4,528
  • 2016 -5,012
  • 2017 -7,672
  • 2018 - 6,004
  • 2019 -5,975
  • 2020 - 6,731
  • 2021- 2,357
  • ಒಟ್ಟು -38,369

ABOUT THE AUTHOR

...view details