ಕರ್ನಾಟಕ

karnataka

ETV Bharat / state

ಕೆಕೆಆರ್​ಡಿಬಿ: ₹ 363 ಕೋಟಿ ವೆಚ್ಚದ ಕ್ರಿಯಾಯೋಜನೆ ಅನುಮೋದನೆ

ಗುಲ್ಬರ್ಗಾ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಮೈಕ್ರೋ ಯೋಜನೆಯಡಿ ₹ 254 ಕೋಟಿ ಹಾಗೂ ಮ್ಯಾಕ್ರೋ ಯೋಜನೆಯಡಿ ₹109 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಗುಲ್ಬಾರ್ಗ ಜಿಲ್ಲಾ ಸಲಹಾ ಸಮಿತಿ ಸಭೆಯಲ್ಲಿ (ಕೆಕೆಆರ್​ಡಿಬಿ) ಅನುಮೋದನೆ ನೀಡಲಾಗಿದೆ.

ಕೆಕೆಆರ್​ಡಿಬಿ: ₹ 363 ಕೋಟಿ ವೆಚ್ಚದ ಕ್ರಿಯಾಯೋಜನೆ ಅನುಮೋದನೆ

By

Published : Sep 27, 2019, 11:44 PM IST

ಬೆಂಗಳೂರು:ಗುಲ್ಬರ್ಗಾ ಜಿಲ್ಲೆ ವ್ಯಾಪ್ತಿಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಮೈಕ್ರೋ ಯೋಜನೆಯಡಿ ₹ 254 ಕೋಟಿ ಹಾಗು ಮ್ಯಾಕ್ರೋ ಯೋಜನೆಯಡಿ ₹109 ಕೋಟಿ ವೆಚ್ಚದ ಕ್ರಿಯಾ ಯೋಜನೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಲಬುರಗಿ ಜಿಲ್ಲಾ ಸಲಹಾ ಸಮಿತಿಯು (ಕೆಕೆಆರ್​ಡಿಬಿ) ಅನುಮೋದನೆ ನೀಡಿದೆ.

ವಿಕಾಸಸೌಧದಲ್ಲಿ ಇಂದು ಕಲಬುರಗಿ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಲಹಾ ಸಮಿತಿ ಸಭೆಯು ಮೈಕ್ರೋ ಯೋಜನೆಯಡಿ ಸಾಮಾಜಿಕ ವಲಯಕ್ಕೆ ₹100 ಕೋಟಿ ರೂ. ಮತ್ತು ಸಾಮಾಜಿಕೇತರ ವಲಯಕ್ಕೆ ₹151 ಕೋಟಿ ರೂ. ಹಾಗೂ ಮ್ಯಾಕ್ರೋ ಯೋಜನೆಯಡಿ ಸಾಮಾಜಿಕ ವಲಯಕ್ಕೆ ₹54 ಕೋಟಿ ರೂ. ಮತ್ತು ಸಾಮಾಜಿಕೇತರ ವಲಯಕ್ಕೆ 54 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಯಿತು.

ಡಾ. ನಂಜುಂಡಪ್ಪ ವರದಿಯ ಆಧಾರದಡಿ ಈ ಪ್ರದೇಶದ ಅಭಿವೃದ್ಧಿಗಾಗಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಮಂಡಳಿ ವ್ಯಾಪ್ತಿಯಲ್ಲಿ ಒಟ್ಟು 41 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತಿವೆ. ₹1,500 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ. ನಿಯಮಾನುಸಾರ ಈ ಯೋಜನೆಯಡಿ ಬೃಹತ್ ಯೋಜನೆಗಳಾಗಿದ್ದರೂ 3 ವರ್ಷಗಳೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ವಿಳಂಬ ಮಾಡದೇ ಎಲ್ಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಹೊಸ ತಾಲೂಕುಗಳಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೂ ಆದ್ಯತೆ ನೀಡಲಾಗುವುದು. ಮಂಡಳಿಗೆ ತಾಂತ್ರಿಕ ಸಿಬ್ಬಂದಿ ನಿಯೋಜಿಸಿ ತಾಂತ್ರಿಕವಾಗಿ ಸದೃಢಗೊಳಿಸಲಾಗುವುದು. ಕಾಮಗಾರಿಗಳ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲಾಗುವುದು. ಈ ಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಗೋವಿಂದ ಎಂ. ಕಾರಜೋಳ ಅವರು ಸಭೆಯಲ್ಲಿ ತಿಳಿಸಿದರು.

ABOUT THE AUTHOR

...view details