ಕರ್ನಾಟಕ

karnataka

ETV Bharat / state

ಆಡಳಿತಕ್ಕೆ ಮೇಜರ್ ಸರ್ಜರಿ: 33 ಐಎಎಸ್ ಅಧಿಕಾರಿಗಳ ವರ್ಗಾವಣೆ, ದ.ಕನ್ನಡಕ್ಕೆ ಸಿಂಧು ಡಿಸಿ

ರಾಜ್ಯ ಸರ್ಕಾರ 33 ಐಎಎಸ್​ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್​ ರಾಜೀನಾಮೆ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ಸಿಂಧು ರೂಪೇಶ ಅವರನ್ನು ವರ್ಗಾಯಿಸಿದೆ.

ರಾಜ್ಯ ಸರ್ಕಾರದ 33 ಐಎಎಸ್​ ಅಧಿಕಾರಿಗಳ ವರ್ಗಾವಣೆ

By

Published : Sep 7, 2019, 7:08 AM IST

ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಕ್ಕೆ‌ ಮೇಜರ್ ಸರ್ಜರಿ ಮಾಡಿದೆ. ಶುಕ್ರವಾರ ಒಟ್ಟು 33 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಮೊದಲಿಗೆ 12 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ, ಬಳಿಕ ಮತ್ತೆ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ 33 ಐಎಎಸ್​ ಅಧಿಕಾರಿಗಳ ವರ್ಗಾವಣೆ

ಐಎಎಸ್ ಸೇವೆಗೆ ರಾಜೀನಾಮೆ‌ ನೀಡಿರುವ ಸಸಿಕಾಂತ್ ಸೆಂಥಿಲ್ ಅವರ ದಕ್ಷಿಣ ಕನ್ನಡ ಡಿಸಿ ಸ್ಥಾನಕ್ಕೆ ಸಿಂಧು ರುಪೇಶ್ ಅವ​ರನ್ನು ವರ್ಗಾವಣೆ ಮಾಡಲಾಗಿದೆ.

ಯಾರು ಎಲ್ಲಿಗೆ ವರ್ಗಾವಣೆ
ವಿ‌.ಅನ್ಬು ಕುಮಾರ್- ಹೆಚ್ಚುವರಿ ಆಯುಕ್ತ, ಬಿಬಿಎಂಪಿ (ಆಡಳಿತ)
ಎನ್.ವಿ.ಪ್ರಸಾದ್- ನಿರ್ದೇಶಕ, ಸಮೂಹ ಶಿಕ್ಷಣ ನಿರ್ದೇಶನಾಲಯ
ಡಿ.ರಂದೀಪ್​- ಹೆಚ್ಚುವರಿ ಆಯುಕ್ತ, ಬಿಬಿಎಂಪಿ (ಘನ ತ್ಯಾಜ್ಯ ನಿರ್ವಹಣೆ)
ಡಾ.ಶಿವಶಂಕರ್ ಎನ್- ಎಂಡಿ, ಕರ್ನಾಟಕ ರಾಜ್ಯ ಉಗ್ರಾಣ ನಿಗಮ
ಪ್ರೀತಿ ಗೆಹ್ಲೋಟ್- ಸಿಇಒ, ಉಡುಪಿ
ಗ್ಯಾನೇಂದ್ರ ಕುಮಾರ್ ಗಂಗ್ವಾರ್- ಸಿಇಒ, ಗದಗ
ಬೋಯಾರ್ ಹರ್ಷಲ್ ನಾರಾಯಣ್ ರಾವ್- ಸಿಇಒ, ಚಾಮರಾಜನಗರ
ಪಾಂಡ್ವೆ ರಾಹುಲ್ ತುಕಾರಾಂ- ಸಿಇಒ, ದಾವಣಗೆರೆ ಜಿಲ್ಲಾ ಪಂಚಾಯತ್
ಡಾ.ಆನಂದ್.ಕೆ- ಸಿಇಒ, ಬೀದರ್ ಜಿಲ್ಲಾ ಪಂಚಾಯತ್
ದರ್ಶನ್ ಎಚ್.ವಿ- ಆಯುಕ್ತ, ಕಲಬುರ್ಗಿ ನಗರ ಪಾಲಿಕೆ
ಮೊಹಮ್ಮದ್ ಇಕ್ರಮುಲ್ಲಾ ಶರೀಫ್- ಸಿಇಒ, ಜಿಲ್ಲಾ ಪಂಚಾಯತ್ ಕೋಲಾರ
ಡಾ.ಕೆ.ರಾಜೇಂದ್ರ- ಕಾರ್ಯಕಾರಿ ನಿರ್ದೇಶಕ, ಕರ್ನಾಟಕ ಪರೀಕ್ಷ ಪ್ರಾಧಿಕಾರ
ಆರ್.ವೆಂಕಟೇಶ್ ಕುಮಾರ್- ಡಿಸಿ, ರಾಯಚೂರು
ವಿ.ರಾಮ್ ಪ್ರಸಾತ್ ಮನೋಹರ್- ಎಂಡಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ
ಪಲ್ಲವಿ ಅಕುರಾತಿ- ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ, ಡಿಪಿಎಆರ್ (ಚುನಾವಣೆ)
ಟಿ.ಎಚ್.ಎಂ.ಕುಮಾರ್- ಯೋಜನಾ ನಿರ್ದೇಶಕ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ
ರಿಚರ್ಡ್ ವಿನ್ಸೆಂಟ್ ಡಿಸೋಜಾ- ಮಿಷನ್ ನಿರ್ದೇಶಕ, ರಾಷ್ಟ್ರೀಯ ಆರೋಗ್ಯ ಮಿಷನ್
ಕೆ.ಪಿ.ಮೋಹನ್ ರಾಜ್- ಆಯುಕ್ತ, ಉದ್ಯೋಗ ಮತ್ತು ತರಬೇತಿ
ಕರೀಗೌಡ- ನಿರ್ದೇಶಕ, ಕೃಷಿ ಮಾರುಕಟ್ಟೆ ಇಲಾಖೆ

ABOUT THE AUTHOR

...view details