ಕರ್ನಾಟಕ

karnataka

ETV Bharat / state

ಸೌದಿಯಲ್ಲಿ ಸಿಲುಕಿದ್ದ 32 ಕನ್ನಡಿಗರು ವಾಪಸ್: ಎಲ್ಲರಿಗೂ ಕೌಶಲ್ಯತೆ ಆಧಾರದ ಮೇಲೆ ಉದ್ಯೋಗ

ಉದ್ಯೋಗ ವೀಸಾ ಅವಧಿ ಮುಗಿದು ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿದ್ದ 32 ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಂಡಿದ್ದು, ಎಲ್ಲ ಕನ್ನಡಿಗರಿಗೂ ಅವರವರ ಕೌಶಲ್ಯತೆ ಆಧಾರದ ಮೇಲೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

32 kannadiga's return from Saudi Arabia
ಸೌದಿಯಲ್ಲಿ ಸಿಲುಕಿದ್ದ 32 ಕನ್ನಡಿಗರು ವಾಪಸ್: ಎಲ್ಲರಿಗೂ ಕೌಶಲ್ಯತೆ ಆಧಾರದ ಮೇಲೆ ಉದ್ಯೋಗ

By

Published : Sep 24, 2020, 7:32 PM IST

ಬೆಂಗಳೂರು: ಉದ್ಯೋಗ ವೀಸಾ ಅವಧಿ ಮುಗಿದು ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿದ್ದ 32 ಕನ್ನಡಿಗರನ್ನು ರಾಜ್ಯಸರ್ಕಾರ ಸುರಕ್ಷಿತವಾಗಿ ತಾಯ್ನಾಡಿಗೆ ಕರೆಸಿಕೊಂಡಿದೆ.

ಸೌದಿಯಲ್ಲಿ ಸಿಲುಕಿದ್ದ 32 ಕನ್ನಡಿಗರು ವಾಪಸ್: ಎಲ್ಲರಿಗೂ ಕೌಶಲ್ಯತೆ ಆಧಾರದ ಮೇಲೆ ಉದ್ಯೋಗ

ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಸೂಚನೆಯಂತೆ ಸೌದಿ ಕನ್ನಡಿಗರ ನೆರವಿಗೆ ಧಾವಿಸಿದ ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳು, 32 ಕನ್ನಡಿಗರನ್ನು ತಾಯ್ನಾಡಿಗೆ ವಾಪಸ್‌ ಕರೆಸಿಕೊಂಡಿದ್ದಾರೆ. ಸೌದಿಯಲ್ಲಿ ಕನ್ನಡಿಗರು ಸಿಲುಕಿದ್ದಾರೆಂಬ ಮಾಹಿತಿ ಸಿಕ್ಕ ಕೂಡಲೇ ಉಪ ಮುಖ್ಯಮಂತ್ರಿ, ತಮ್ಮ ಅಧೀನದಲ್ಲಿರುವ ಕೌಶಲ್ಯಾಭಿವೃದ್ಧಿ ನಿಗಮದ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ಕೂಡಲೇ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ದೆಹಲಿಯ ವಿದೇಶಾಂಗ ಇಲಾಖೆ ಹಾಗೂ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳ ಜೊತೆ ಸುದೀರ್ಘ ಮಾತುಕತೆ ನಡೆಸಿದರು. ಬಳಿಕ 32 ಉದ್ಯೋಗಿಗಳನ್ನು ಚೆನ್ನೈಗೆ ಕರೆಸಿಕೊಂಡು, ಅಲ್ಲಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್​ ಮೂಲಕ ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಇವರೆಲ್ಲರನ್ನು ಬೆಂಗಳೂರು ವಿವಿಯಲ್ಲಿರುವ ಹಾಸ್ಟೆಲ್​ನಲ್ಲಿಟ್ಟಿದ್ದು, ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ.

ಎಲ್ಲರಿಗೂ ಉದ್ಯೋಗ:ಕೋವಿಡ್‌ ಹಿನ್ನೆಲೆಯಲ್ಲಿ ಸೌದಿಯಲ್ಲಿಯೂ ಉದ್ಯೋಗ ನಷ್ಟವಾಗಿದ್ದು, ಇನ್ನು ಕೆಲ ದಿನಗಳ ಕಾಲ ಅಲ್ಲಿ ಇದೇ ಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ಅಲ್ಲಿ ವಿನಾಕಾರಣ ಕಷ್ಟಕ್ಕೆ ಸಿಲುಕಿಕೊಳ್ಳುವ ಬದಲು ತಾಯ್ನಾಡಿಗೆ ವಾಪಸ್‌ ಬರುವುದು ಉತ್ತಮ. ಸೌದಿಯಿಂದ ವಾಪಸ್‌ ಬಂದಿರುವ ಎಲ್ಲ ಕನ್ನಡಿಗರಿಗೂ ಅವರವರ ಕೌಶಲ್ಯತೆ ಆಧಾರದ ಮೇಲೆ ಉದ್ಯೋಗಾವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ABOUT THE AUTHOR

...view details