ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿಂದು ಕೊರೊನಾ ಸ್ಫೋಟ: ಬೆಂಗಳೂರಲ್ಲಿ ಒಂದೇ ದಿನ 20,733 ಮಂದಿಗೆ ಸೋಂಕು ದೃಢ

ರಾಜ್ಯದಲ್ಲಿಂದು ಬರೋಬ್ಬರಿ 34,804 ಮಂದಿಗೆ ಕೊರೊನಾ ದೃಢವಾಗಿದ್ದು, 143 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 13,39,201ಕ್ಕೆ ಏರಿಕೆಯಾಗಿದೆ.

30-thousand-new-cases-reported-in-karnataka-today
ರಾಜ್ಯದಲ್ಲಿಂದು ಕೋವಿಡ್ ಸ್ಫೋಟ

By

Published : Apr 25, 2021, 7:51 PM IST

Updated : Apr 25, 2021, 8:13 PM IST

ಬೆಂಗಳೂರು: ರಾಜ್ಯದಲ್ಲಿಂದು ಸಹ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಇಂದು ಬರೋಬ್ಬರಿ 34,804 ಮಂದಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 13,39,201ಕ್ಕೆ ಏರಿಕೆಯಾಗಿದೆ.

ಈ ನಡುವೆ 143 ಮಂದಿ ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 14,426ಕ್ಕೆ ಏರಿದೆ. ಇತ್ತ ಇಂದು 6,982 ಮಂದಿ ಕೋವಿಡ್​​ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟು 10,62,594 ಮಂದಿ ಈವರೆಗೆ ಡಿಸ್ಚಾರ್ಜ್​ ಆದಂತಾಗಿದೆ.

ರಾಜ್ಯದ ಕೊರೊನಾ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ 2,62,162 ಸಕ್ರಿಯ ಪ್ರಕರಣಗಳಿದ್ದು, 1,492 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇ.19.70ರಷ್ಟಿದ್ದು, ಸಾವಿನ‌ ಶೇಕಡವಾರು ಪ್ರಮಾಣ 0.41% ರಷ್ಟಿದೆ.‌

ಅಲ್ಲದೆ ಬೆಂಗಳೂರು ಒಂದರಲ್ಲೇ 20, 733 ಮಂದಿಗೆ ಕೊರೊನಾ ದೃಢವಾಗಿದ್ದು, 77 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಕೋವಿಡ್ ಪ್ರಕರಣಗಳ ಸಂಖ್ಯೆ

ಯುಕೆಯಿಂದ ಈವರೆಗೆ ಬಂದಿರುವ 64 ಪ್ರಯಾಣಿಕರಲ್ಲಿ ಕೊರೊನಾ‌ ಸೋಂಕು ದೃಢಪಟ್ಟಿದ್ದು, ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ 26 ಜನರಿಗೆ ಕೊರೊನಾ ತಗುಲಿದೆ. ರೂಪಾಂತರ ಸೋಂಕು 46 ಜನರಿಗೆ ಹಾಗೂ ಸೌತ್ ಆಫ್ರಿಕಾದಿಂದ ಬಂದ 6 ಜನರಲ್ಲಿ ಸೋಂಕು ದೃಢವಾಗಿದೆ.

Last Updated : Apr 25, 2021, 8:13 PM IST

ABOUT THE AUTHOR

...view details