ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟಿನ ಆರೋಪ ಪ್ರಕರಣವನ್ನು ಬೆನ್ನತ್ತಿರುವ ಪೊಲೀಸರು ಸದ್ಯ ನಗರದೆಲ್ಲೆಡೆ ಅಲರ್ಟ್ ಆಗಿದ್ದಾರೆ. ಈ ಹಿನ್ನೆಲೆ ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ಗಾಂಜಾ ಸಾಗಿಸಲು ಪ್ರಯತ್ನಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ತಿಕ್ ಅಲಿಯಾಸ್ ಕಬಾಲಿ, ವಿಕ್ಕಿ ಎಂ, ಪ್ರೇಮ್ ಕುಮಾರ್ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಮುಖ ಆರೋಪಿ ಕಾರ್ತಿಕ್ ಅಲಿಯಾಸ್ ಕಬಾಲಿ ಮೇಲೆ ಈ ಹಿಂದೆ ಎರಡು ಪ್ರಕರಣಗಳಿದ್ದು, ನಂತರ ಜಾಮೀನು ಮೇಲೆ ಹೊರಬಂದು ಮತ್ತೆ ಗಾಂಜಾ ಪೆಡ್ಲಿಂಗ್ ಮಾಡುತ್ತಿದ್ದ. ಇನ್ನು ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾದ ಪ್ರೇಮ್ ಕುಮಾರ್, ಕಾರ್ತಿಕ್ ಜೊತೆ ಸೇರಿ ಗಾಂಜಾ ಮಾರುತ್ತಿದ್ದನಂತೆ.