ಬೆಂಗಳೂರು :ಕೊರೊನಾ ಸೋಂಕು ನಿಯಂತ್ರಿಸುವ ಹಿನ್ನೆಲೆ ಬಿಬಿಎಂಪಿ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸುವಂತೆ ನಗರದ ಜನರಿಗೆ ಈಗಾಗಲೇ ಅರಿವು ಮೂಡಿಸಿದೆ. ಆದರೂ ಸಹ ಮಾಸ್ಕ್ ಧರಿಸದೆ ಜನ ಓಡಾಡುವುದು ಕಂಡು ಬಂದಿದೆ. ಇದಕ್ಕಾಗಿ ಜನತೆಗೆ ದಂಡ ಸಹ ವಿಧಿಸುತ್ತಿದೆ.
ರಾಜಧಾನಿಯಲ್ಲಿ ಒಂದೇ ದಿನ ಮಾಸ್ಕ್ ಧರಿಸದವರಿಂದ ಬರೋಬ್ಬರಿ ₹3.78 ಲಕ್ಷ ದಂಡ - BBMP
ಮಾರ್ಷಲ್ಸ್ ತಂಡ ಪ್ರಮುಖವಾಗಿ ಜನನಿಬಿಡ ಪ್ರದೇಶಗಳ ಮಾರುಕಟ್ಟೆ, ಬಸ್ ಸ್ಟಾಂಡ್ ಹಾಗೂ ಪ್ರಮುಖ ಸಿಗ್ನಲ್ಗಳಲ್ಲಿ ಈ ತಂಡ ಮಾಸ್ಕ್ ಹಾಕದವರಿಗೆ ದಂಡ ಹಾಕುತ್ತಿದೆ..
ರಾಜಧಾನಿಯಲ್ಲಿ ಒಂದೇ ದಿನ ಮಾಸ್ಕ್ ಧರಿಸದವರಿಂದ ಬರೋಬ್ಬರಿ 3.78 ಲಕ್ಷ ದಂಡ ವಸೂಲಿ
ಇಂದು ಸಹ ಮಾಸ್ಕ್ ಇಲ್ಲದೆ ಓಡಾಡಿದ 1,893 ಮಂದಿಯಿಂದ ತಲಾ ₹200ನಂತೆ 3.78 ಲಕ್ಷ ರೂ. ದಂಡ ಸಂಗ್ರಹಿಸಿದೆ. ಮಾರ್ಷಲ್ಸ್ ತಂಡ ಪ್ರಮುಖವಾಗಿ ಜನನಿಬಿಡ ಪ್ರದೇಶಗಳ ಮಾರುಕಟ್ಟೆ, ಬಸ್ ಸ್ಟಾಂಡ್ ಹಾಗೂ ಪ್ರಮುಖ ಸಿಗ್ನಲ್ಗಳಲ್ಲಿ ಈ ತಂಡ ಮಾಸ್ಕ್ ಹಾಕದವರಿಗೆ ದಂಡ ಹಾಕುತ್ತಿದೆ.
ಇಂದು ಪೂರ್ವ ವಿಭಾಗದಲ್ಲಿ 423, ಪಶ್ಚಿಮ ವಿಭಾಗದಲ್ಲಿ 184, ದಕ್ಷಿಣ ವಿಭಾಗದಲ್ಲಿ 601, ಮಹದೇವಪುರ 129, ಆರ್‌ಆರ್‌ನಗರ 68, ಯಲಹಂಕ 77, ದಾಸರಹಳ್ಳಿ 33, ಬೊಮ್ಮನಹಳ್ಳಿ 309 ಪ್ರಕರಣ ಸೇರಿ ಒಟ್ಟು 1,824 ಜನರಿಗೆ ದಂಡ ವಿಧಿಸಲಾಗಿದೆ.