ಕರ್ನಾಟಕ

karnataka

ETV Bharat / state

ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭ - news kannada

ಈ ಸಾಲಿನ ದ್ವಿತೀಯ ಪಿಯು ಪೂರಕ ಪರೀಕ್ಷೆಗಳು ಇದೇ ಜೂ. 11ರಿಂದ 20ರವರೆಗೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯು ತಿಳಿಸಿದೆ.

ನಾಳೆಯಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭ

By

Published : Jun 10, 2019, 4:35 PM IST

ಬೆಂಗಳೂರು:ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು‌ ನಾಳೆಯಿಂದ ಆರಂಭವಾಗಲಿದೆ. ಈ ಬಾರಿ ಸುಮಾರು 2,29, 731 ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲಿದ್ದಾರೆ.

ಜೂನ್‌ 11 ರಿಂದ ಜೂನ್ 20 ರವರೆಗೂ ಪರೀಕ್ಷೆ ನಡೆಯಲಿದೆ.‌ ಬೆಳಗ್ಗೆ 10-15ರಿಂದ 1-30 ರವರೆಗೆ, ಮಧ್ಯಾಹ್ನ 2-30ರಿಂದ 5-45ರವರೆಗೆ ಪರೀಕ್ಷೆ ನಡೆಯಲಿದೆ. ಕಲಾ ವಿಭಾಗದಲ್ಲಿ 82,716, ವಾಣಿಜ್ಯ ವಿಭಾಗದಲ್ಲಿ 76776, ವಿಜ್ಞಾನ ವಿಭಾಗದಲ್ಲಿ 70239 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಳೆದ ಬಾರಿ ಪೂರಕ ಪರೀಕ್ಷೆಯನ್ನ 2,24,954 ಬರೆದಿದ್ದರು. ಈ ಬಾರಿ ಪೂರಕ ಪರೀಕ್ಷೆ ಬರೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕಣ್ಗಾವಲು ಇರಲಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಡಿಜಿಟಲ್ ವಾಚ್ ಕೊಂಡೊಯ್ಯುವಂತಿಲ್ಲ. ಪರೀಕ್ಷಾ ಕೇಂದ್ರದ ಆಸುಪಾಸಿನ ಜೆರಾಕ್ಸ್ ಅಂಗಡಿಗಳಿಗೂ ಬೀಗ ಹಾಕಲಾಗಿದೆ.

ಪೂರಕ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ:

  • 11-6-2019- ಸಮಾಜ ಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ ಶಾಸ್ತ್ರ, ಗೃಹ ಶಾಸ್ತ್ರ
  • 12-6-2019: ಇಂಗ್ಲಿಷ್​​
  • 13-6-2019: ಅರ್ಥಶಾಸ್ತ್ರ, ಭೌತಶಾಸ್ತ್ರ
  • 14-6-2019: ಕಂಪ್ಯೂಟರ್ ಸೈನ್ಸ್
  • 15-6-2019: ಕನ್ನಡ
  • 17-6-2019: ರಾಸಾಯನ ಶಾಸ್ತ್ರ
  • 18-6-2019: ಇತಿಹಾಸ ಶಾಸ್ತ್ರ, ಜೀವ ಶಾಸ್ತ್ರ
  • 19-6-2019: ರಾಜ್ಯಶಾಸ್ತ್ರ
  • 20-6-2019: ಹಿಂದಿ

ABOUT THE AUTHOR

...view details