ಕರ್ನಾಟಕ

karnataka

ETV Bharat / state

ಬಿಬಿಎಂಪಿ ಗುತ್ತಿಗೆದಾರರಿಗೆ 23 ತಿಂಗಳ ಬಿಲ್ ಬಾಕಿ: ಆಡಳಿತಗಾರರಿಗೆ ಎಚ್ಚರಿಕೆ ಪತ್ರ

ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ 23 ತಿಂಗಳ ಪಾವತಿಯಾಗದಿದ್ದರೆ ಎಲ್ಲ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಆಡಳಿತಗಾರರಿಗೆ, ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ ಮಂಜುನಾಥ್ ಎಚ್ಚರಿಕೆ ಪತ್ರ ಬರೆದಿದ್ದಾರೆ.

23-month bill pending for BBMP contractors
ಬಿಬಿಎಂಪಿ ಗುತ್ತಿಗೆದಾರರಿಗೆ 23 ತಿಂಗಳ ಬಿಲ್ ಬಾಕಿ: ಆಡಳಿತಗಾರರಿಗೆ ಎಚ್ಚರಿಕೆ ಪತ್ರ

By

Published : Sep 30, 2020, 11:27 PM IST

ಬೆಂಗಳೂರು: ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ 23 ತಿಂಗಳಿಂದ ಬಿಲ್ ಪಾವತಿ ಬಾಕಿ ಉಳಿದಿದ್ದು, ಬಿಲ್ ಪಾವತಿಯಾಗದಿದ್ದರೆ ಎಲ್ಲ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುವುದಾಗಿ ಆಡಳಿತಗಾರರಿಗೆ ಎಚ್ಚರಿಕೆ ಪತ್ರ ಬರೆದಿದ್ದಾರೆ.

ಬಿಬಿಎಂಪಿ ಗುತ್ತಿಗೆದಾರರಿಗೆ 23 ತಿಂಗಳ ಬಿಲ್ ಬಾಕಿ: ಆಡಳಿತಗಾರರಿಗೆ ಎಚ್ಚರಿಕೆ ಪತ್ರ

ಕೋವಿಡ್-16ನಿಂದ ಈಗಾಗಲೇ ಮನೆ ನಿರ್ವಹಣೆಯೂ ಕಷ್ಟವಾಗಿದೆ. ಹೀಗಾಗಿ ಕೂಡಲೇ ಬಿಲ್ ಪಾವತಿ ಮಾಡಬೇಕು. ಇದೇ ವೇಳೆ ಚುನಾವಣೆಯೂ ಬಂದಿರುವುದರಿಂದ ಬಾಕಿ ಬಿಲ್ ಪಾವತಿಸದಿದ್ದರೆ, ಚುನಾವಣಾ ಕೆಲಸಗಳಾದ ಪೆಂಡಾಲ್ ಹಾಕುವುದು, ಊಟ ವಿತರಣೆ, ವಿದ್ಯುತ್ ವ್ಯವಸ್ಥೆ ಮಾಡುವುದಿಲ್ಲ.

ಇನ್ನು, ನಗರದ ಹಲವೆಡೆ ರಸ್ತೆ, ಚರಂಡಿ, ಗುಂಡಿ ಮುಚ್ಚುವ ಕಾಮಗಾರಿಗಳನ್ನು ನಿಲ್ಲಿಸಲಾಗುವುದು ಎಂದು ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ ಮಂಜುನಾಥ್ ಪತ್ರ ಬರೆದಿದ್ದಾರೆ.

ABOUT THE AUTHOR

...view details