ಬೆಂಗಳೂರು: ಬೆಂಗಳೂರು ನಗರದ ಆಗ್ನೇಯ ವಿಭಾಗದ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 21 ಮಂದಿ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ಹಾಗೂ ಬೈಕ್ ಸೇರಿದಂತೆ ₹ 90.20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
51 ಪ್ರಕರಣದಲ್ಲಿ 21 ಆರೋಪಿಗಳ ಸೆರೆ: ₹ 90 ಲಕ್ಷ ಮಾಲು ಪೊಲೀಸ್ ವಶಕ್ಕೆ - Bangalore Police
ಬೆಂಗಳೂರು ನಗರದ ಆಗ್ನೇಯ ವಿಭಾಗದ ಪೊಲೀಸರು 21 ಆರೋಪಿಗಳಿಂದ 51 ಪ್ರಕರಣ ಬೇಧಿಸಿ ₹90 ಲಕ್ಷ ಮೌಲ್ಯದ ಬೈಕ್, ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಆಗ್ನೇಯ ವಿಭಾಗದಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ, ಮನೆಗಳ್ಳತನ, ಅಕ್ರಮ ಮಾದಕ ವಸ್ತುಗಳ ಮಾರಾಟ ಯತ್ನ ಸೇರಿದಂತೆ 51 ಪ್ರಕರಣಗಳನ್ನು ಬೇಧಿಸಲಾಗಿದ್ದು, ಅಂತಾರಾಜ್ಯ ಕಳ್ಳರು ಸೇರಿದಂತೆ 21 ಮಂದಿ ಆರೋಪಿಗಳನ್ನು ಬಂಧಿಸಿ ಅವರಿಂದ 400 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿ ವಸ್ತು, 47 ದ್ವಿಚಕ್ರ ವಾಹನಗಳು, 2 ನಾಲ್ಕು ಚಕ್ರ ವಾಹನಗಳು 22.5 ಕೆಜಿ ಗಾಂಜಾ ಸೇರಿದಂತೆ ₹ 90 ಲಕ್ಷದ ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿದ್ದಾರೆ.
ಸದ್ಯ 51 ಪ್ರಕರಣಗಳಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸರು 9 ಪ್ರಕರಣಗಳು, ಆಡುಗೋಡಿ 2, ಕೋರಮಂಗಲ 30, ಪರಪ್ಪನ ಅಗ್ರಹಾರ 10 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ.