ಬೆಂಗಳೂರು: ನಗರದಲ್ಲಿಂದು ಮತ್ತೆ ಕೋವಿಡ್ ಏರುಗತಿಯಲ್ಲಿದ್ದು, ಬರೋಬ್ಬರಿ 17,061 ಜನರಿಗೆ ಕೋವಿಡ್ ದೃಢಪಟ್ಟಿದೆ. ನಿನ್ನೆ 15,244 ಜನರಲ್ಲಿ ಕೋವಿಡ್ ಕಾಣಿಸಿಕೊಂಡಿತ್ತು.
ಬೆಂಗಳೂರು ನಗರದಲ್ಲಿಂದು 17,061 ಕೋವಿಡ್ ಪಾಸಿಟಿವ್!
ಬೆಂಗಳೂರು ನಗರದಲ್ಲಿಂದು 17,061 ಜನರಿಗೆ ಕೋವಿಡ್ ದೃಢಪಟ್ಟಿದೆ. ಒಟ್ಟು 1,37,813 ಜನ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
17,061 new covid cases found today in bengaluru
ಇಂದು ಮತ್ತೆ ನಿನ್ನೆಗಿಂತ ಹೆಚ್ಚುವರಿ ಎರಡು ಸಾವಿರ ಪ್ರಕರಣ ಏರಿಕೆಯಾಗಿದೆ. 68 ಜನ ನಿನ್ನೆ ಮೃತಪಟ್ಟಿದ್ದರು.
ದೇಶದಲ್ಲೇ ಅತಿಹೆಚ್ಚು ಪಾಸಿಟಿವ್ ಪ್ರಕರಣ ಬೆಂಗಳೂರು ನಗರದಲ್ಲಿದ್ದು, 1,37,813 ಜನ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರದ ಆ್ಯಕ್ಟಿವ್ ಪ್ರಕರಣಗಳ ಪ್ರಮಾಣ ಶೇ 23.01ರಷ್ಟಿದೆ.