ಕರ್ನಾಟಕ

karnataka

ETV Bharat / state

ಜೈಲಿಂದಲೇ‌ ಮನೆ ಕಳ್ಳತನ ಪ್ಲಾನ್​​ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್‌: 17ಲಕ್ಷ ಮೌಲ್ಯದ ಚಿನ್ನ ವಶ - ಜೈಲಿನಲ್ಲಿದ್ದುಕೊಂಡೇ ಕಳ್ಳತನಕ್ಕೆ ಸ್ಕೆಚ್​

ಜೈಲಿನಲ್ಲಿದ್ದುಕೊಂಡೇ ಕಳ್ಳತನಕ್ಕೆ ಸ್ಕೆಚ್​ ಹಾಕಿದ್ದ ಕುಖ್ಯಾತ ಮನೆಗಳ್ಳರನ್ನು ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ‌ 17 ಲಕ್ಷ ರೂ. ಮೌಲ್ಯದ 330 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

17 lakhs worth gold seized from arrested robbery gang
17ಲಕ್ಷ ಮೌಲ್ಯದ ಚಿನ್ನ ವಶಕ್ಕೆ

By

Published : Aug 16, 2021, 9:13 PM IST

ಬೆಂಗಳೂರು: ಬಂಡೆಪಾಳ್ಯ ಪೊಲೀಸರ ಕಾರ್ಯಾಚರಣೆಯಿಂದ ಕುಖ್ಯಾತ ಮನೆ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಲಾಗಿದೆ. ಕುಖ್ಯಾತ ಮನೆಗಳ್ಳರಾದ ವೆಂಕಟೇಶ್, ಗುರುಪ್ರಸಾದ್, ಗಿರೀಶ್ ಹಾಗೂ ಮಂಜುನಾಥ್ ಬಂಧಿತ ಆರೋಪಿಗಳು.

ಜೈಲಿನಲ್ಲಿದ್ದುಕೊಂಡೇ ಹೊರಗೆ ಅಪರಾಧ ಮಾಡಲು ಆರೋಪಿಗಳು ಸ್ಕೆಚ್ ಹಾಕುತ್ತಿದ್ದರು. ನಗರದ ಮೂವರು ಆರೋಪಿಗಳು ಬೇರೆ - ಬೇರೆ ಪ್ರಕರಣಗಳಲ್ಲಿ ಜೈಲು ಸೇರಿದ್ದರೂ, ಜೈಲಿನಲ್ಲಿದ್ದುಕೊಂಡೆ ದರೋಡೆಗೆ ಪ್ಲ್ಯಾನ್​ ಮಾಡಿದ್ದಾರೆ.‌

ಈ ಮೊದಲು‌ ಗೂಂಡಾ ಕಾಯ್ದೆ ಅಡಿ ಮಂಜ ಅಲಿಯಾಸ್ ಕುಳ್ಳ ಮಂಜ ಬಂಧನವಾಗಿದ್ದ. ಜೊತೆಗೆ ವೆಂಕಟೇಶ್ ಮಾದನಾಯಕನಹಳ್ಳಿ ಸಹ ಪ್ರಕರಣ ಒಂದರಲ್ಲಿ ಜೈಲು ಸೇರಿದ್ದ.‌ ಜೈಲು ವಾಸದಲ್ಲಿದ್ದಾಗ ಈ‌ ಇಬ್ಬರು ಆರೋಪಿಗಳು ಜೈಲಿನಲ್ಲಿ ಪರಸ್ಪರ ಪರಿಚಯವಾಗಿದ್ದರು. ನಂತರ ಇಬ್ಬರೂ ಸೇರಿ ಜೈಲಿನಲ್ಲಿ ಕುಳಿತು ಕಳ್ಳತನದ ಬಗ್ಗೆ ಸ್ಕೆಚ್ ಹಾಕಿದ್ದರು‌.

17ಲಕ್ಷ ಮೌಲ್ಯದ ಚಿನ್ನ ವಶಕ್ಕೆ

ಕೆಲ ದಿನಗಳ ಬಳಿಕ ಆರೋಪಿ ವೆಂಕಟೇಶ್ ಜಾಮೀನು ಮೇಲೆ ಜೈಲಿನಿಂದ ಹೊರಬಂದಿದ್ದ. ವೆಂಕಟೇಶ್ ಹೊರ ಬಂದಾಗಲೂ‌ ಆರೋಪಿ ಕುಳ್ಳ ಮಂಜನನ್ನ ಜೈಲಿನಲ್ಲಿ‌ ಸಂಪರ್ಕ ಮಾಡಿದ್ದ. ಈ ವೇಳೆ ಹೊರಬಂದ ವೆಂಕಟೇಶ್‌ಗೆ ಜೈಲಿನಲ್ಲಿದ್ದ ಕುಳ್ಳ‌ ಮಂಜ ಗುರುಪ್ರಸಾದ್ ಎಂಬುವನ ಪರಿಚಯಿಸಿದ್ದ. ನಂತರ ಗುರುಪ್ರಸಾದ್ ಹಾಗೂ ವೆಂಕಟೇಶ್ ಸೇರಿ ನಗರದ ಹಲವು ಕಡೆ ಮನೆಗಳ್ಳತನ ಮಾಡಿದ್ದರು.

ಎಲ್ಲೆಲ್ಲಿ ಇವರ ಕೈಚಳಕ

ಬಂಡೆಪಾಳ್ಯ, ಜೆಪಿನಗರ, ಬ್ಯಾಡರಹಳ್ಳಿ, ರಾಜಗೋಪಾ‌ಲನಗರ, ನಂದಿನಿ ಲೇಔಟ್​​ನಲ್ಲಿಯೂ ಮನೆಗಳ್ಳತನ ಮಾಡಿದ್ದರು. ಈ ಮಧ್ಯೆ ಜೈಲಿನಿಂದ ಹೊರಬಂದ ಕುಳ್ಳ ಮಂಜ ತನ್ನ ಗ್ರಾಮಕ್ಕೆ ವೆಂಕಟೇಶ್‌ನನ್ನ ಕರೆಸಿಕೊಂಡಿದ್ದ. ಕುಳ್ಳಮಂಜನ ಕೂಡ್ಲು ಗ್ರಾಮದಲ್ಲಿರುವ ಮನೆಯಲ್ಲಿ ಕುಳಿತು ವೆಂಕಟೇಶ್ ಜೊತೆ ಸೇರಿ ಕಳ್ಳತನಕ್ಕೆ ಮಾಸ್ಟರ್ ಪ್ಲಾನ್ ಮಾಡಿದ್ದರು.

ಈ ಇಬ್ಬರು ಸೇರಿ ಮತ್ತೆ ನಗರದ ಹಲವು ಕಡೆ ಕಳ್ಳತನ ಮುಂದುವರಸಿದ್ದರು. ಇವರ ಜೊತೆಗೆ ಮತ್ತೋರ್ವ ಚಾಲಾಕಿ ಆರೋಪಿ ಸೇರಿಕೊಂಡಿದ್ದ, ಆತನೇ ಗಿರೀಶ್. ಆರೋಪಿಗಳಾದ ವೆಂಕಟೇಶ್ ಹಾಗೂ ಕುಳ್ಳಮಂಜನಿಗೆ ಗಿರೀಶ್ ಎಂಬಾತ ಸಾಥ್ ನೀಡಿದ್ದ. ಕಳ್ಳತನದ ಪ್ಲ್ಯಾನ್​​ ವೇಳೆ‌ ಜೊತೆಯಲ್ಲಿದ್ದುಕೊಂಡೇ ಎ1, ಎ2 ಆರೋಪಿಯಾಗಿದ್ದ ಕುಳ್ಳ ಮಂಜ ಹಾಗೂ ವೆಂಕಟೇಶ್‌ಗೆ ಆರೋಪಿ ಗಿರೀಶ್ ಯಾಮಾರಿಸಿದ್ದ.

ಈ ಚಾಲಾಕಿ‌ ಚೋರ ಗಿರೀಶ್ ಕದ್ದ ಚಿನ್ನಾಭರಣವನ್ನ ಆರೋಪಿಗಳಿಂದ ಕಳ್ಳತನ ಮಾಡಿ ಅಟಿಕಾ ಗೋಲ್ಡ್ ಕಂಪನಿಗೆ ಮಾರಾಟ ಮಾಡಿದ್ದ. ಸದ್ಯ ಬಂಧಿತ ಆರೋಪಿಗಳಿಂದ‌ 17 ಲಕ್ಷ ಮೌಲ್ಯದ 330 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದು ಈ‌‌ ಎಲ್ಲ ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದ್ದಾರೆ.

ABOUT THE AUTHOR

...view details