ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, ಬೆಂಗಳೂರುನಗರದಲ್ಲಿಂದು ಒಂದೇ ದಿನ 1,267 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೊರೊನಾ ಸೋಂಕಿತರ ಸಂಖ್ಯೆ 20,969 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿಂದು 1,267 ಕೊರೊನಾ ಪಾಸಿಟಿವ್ ದೃಢ - 1,267 Corona positive in Bengaluru
ಬೆಂಗಳೂರು ನಗರದಲ್ಲಿಂದು ಒಂದೇ ದಿನ 1,267 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 20,969 ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿಂದು 1,267 ಕೊರೊನಾ ಪಾಸಿಟಿವ್ ದೃಢ
ಇಂದು 664 ಮಂದಿ ಗುಣಮುಖರಾಗಿದ್ದು, ಈವರೆಗೆ 4,992 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 15,599 ಸಕ್ರಿಯ ಪ್ರಕರಣಗಳಿವೆ.
ಇಂದು ಜುಲೈ ತಿಂಗಳಲ್ಲೇ ಮೃತಪಟ್ಟ 56 ಮಂದಿಯ ವರದಿ ಬಿಡುಗಡೆ ಮಾಡಿದ್ದು, ಈ ವರೆಗೆ 377 ಮಂದಿಯನ್ನು ಕೋವಿಡ್ ಬಲಿ ತೆಗೆದುಕೊಂಡಿದೆ. ಐಸಿಯು ನಲ್ಲಿ 317 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.