ದೊಡ್ಡಬಳ್ಳಾಪುರ (ಬೆಂ.ಗ್ರಾ):ಕೊರೊನಾ ವೈರಸ್ ಹಿನ್ನೆಲೆ ಲಾಕ್ಡೌನ್ ಜಾರಿಯಾಗಿದ್ದರಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲಸ ಇಲ್ಲದೆ ಹಸಿವಿನಿಂದ ನರಳುತ್ತಿದ್ದಾರೆ. ಇಂತಹ ಜನರ ಹಸಿವು ನೀಗಿಸಲು ಯುವಕರ ತಂಡ ಸತತ 100 ದಿನಗಳಿಂದ ಅನ್ನದಾಸೋಹ ನಡೆಸುತ್ತಿದೆ.
ದೊಡ್ಡಬಳ್ಳಾಪುರ ತಾಲೂಕಿನ ದರ್ಗಾಜೋಗಹಳ್ಳಿಯಲ್ಲಿ ಬಹುತೇಕ ಗಾರ್ಮೆಂಟ್ಸ್ ಮತ್ತು ಕೂಲಿ ಕಾರ್ಮಿಕರು ವಾಸವಾಗಿದ್ದಾರೆ. ಲಾಕ್ಡೌನ್ನಿಂದ ಕೆಲಸವಿಲ್ಲದೇ ಜನ ಕಷ್ಟ ಪಡುತ್ತಿದ್ದರು. ಇವರ ಕಷ್ಟಕ್ಕೆ ಮಿಡಿದ ಮಲ್ಲೇಶ್ ಮತ್ತು ಯುವಕರ ತಂಡ ಆಹಾರ ನೀಡಲು ಮುಂದಾದರು.
ಕೊರೂನಾ ಸಂತ್ರಸ್ತರಿಗೆ ಸತತ 100 ದಿನಗಳಿಂದ ಅನ್ನದಾಸೋಹ ನೀಡುತ್ತಿದೆ ಯುವಕರ ತಂಡ ಪ್ರಾರಂಭದಲ್ಲಿ ತಮ್ಮ ಸ್ವಂತ ದುಡಿನಲ್ಲಿ ಅನ್ನದಾಸೋಹ ಆರಂಭಿಸಿದ್ದ ಯುವಕರ ತಂಡ ಪ್ರತಿದಿನ ದಾನಿಗಳಿಂದ ಸಹಾಯ ಪಡೆದು ನೂರು ದಿನಗಳಿಂದ ಆಹಾರ ನೀಡುತ್ತಿದ್ದಾರೆ.
ಲಾಕ್ಡೌನ್ ಜಾರಿಯಾದ ಪ್ರಾರಂಭದಲ್ಲಿ ಬಹುತೇಕ ರಾಜಕಾರಣಿಗಳು, ಶ್ರೀಮಂತರು ಬಡವರಿಗೆ ಆಹಾರ ಕಿಟ್ ಕೊಟ್ಟು ಮರೆಯಾದರು, ಆದರೆ ಮಲ್ಲೇಶ್ ಮತ್ತು ಯುವಕರ ತಂಡ ಮಾತ್ರ ಲಾಕ್ಡೌನ್ ಶುರುವಾದ 8ನೇ ದಿನದಿಂದ ಇವತ್ತಿನವರೆಗೂ ಆಹಾರ ನೀಡುತ್ತಿದ್ದಾರೆ. ಬೆಳಗ್ಗೆ ಹಾಲು,ತಿಂಡಿ ಮತ್ತು ಮಧ್ಯಾಹ್ನ ಊಟವನ್ನು ನೂರು ದಿನಗಳಿಂದಲೂ ಮಾಡಿಕೊಂಡು ಬಂದಿದ್ದಾರೆ.
ಇದರ ಜೊತೆಗೆ ವಾರದಲ್ಲಿ ಎರಡು ಬಾರಿ ತರಕಾರಿ ಕಿಟ್ಗಳನ್ನು ಸಹ ವಿತರಣೆ ಮಾಡಿದ್ದಾರೆ. ಯುವಕರ ಸೇವಾ ಮನೋಭಾವಕ್ಕೆ ದುರ್ಗಾಜೋಗಹಳ್ಳಿಯ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.