ದೊಡ್ಡಬಳ್ಳಾಪುರ:ಅಂಗಡಿಯ ವೆಲ್ಡಿಂಗ್ ಮಾಡೋಕೆ ಬಂದವರು ಆಂಟಿ ಜೊತೆ ಬಾಂಡಿಂಗ್ ಶುರು ಮಾಡಿದ್ದ. ಅವನು 27ರ ಪ್ರಾಯದ ಯುವಕ. ಅವರು 35ರ ಆಂಟಿ, ಕದ್ದು ಮುಚ್ಚಿ ಇಬ್ಬರು ಮನೆಯಲ್ಲೇ ಪಲ್ಲಂಗದಾಟ ಶುರುಮಾಡಿದ್ರು. ರೂಮ್ನ ವೆಂಟಿಲೇಟರ್ ಮೂಲಕ ಕಳ್ಳ ಬೆಕ್ಕಿನಂತೆ ಬಂದು ಆಂಟಿ ಜೊತೆ ಸರಸವಾಡಿ ಹೋಗುತ್ತಿದ್ದ ಅವನು ಒಂದು ದಿನ ಆಕೆಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದ.
ಮುಂಜಾನೆ ಮನೆ ಮುಂದೆ ಹರಿದ ನೆತ್ತರು:ಸಂಬಂಧಿಕರ ಗೃಹಪ್ರವೇಶಕ್ಕೆ ಎಂದು ಮುಂಜಾನೆ 5 ಗಂಟೆಗೆ ಮನೆಯಿಂದ ಹೊರಟ ಗಂಡನನ್ನ ಬೀಳ್ಕೊಟ್ಟ ನಂತರ ಆಕೆ ಮೊಬೈಲ್ ಕರೆಯಲ್ಲಿ ತಲ್ಲೀನಳಾಗಿದ್ದಳು. ಚಾಕು ಹಿಡಿದ ಬಂದ ಆತ ಆಕೆಯ ಮೇಲೆ ಮನಸ್ಸೋ ಇಚ್ಛೆ ತಿವಿದು ಅಲ್ಲಿಂದ ಪರಾರಿಯಾಗಿದ್ದ. ತಾಯಿಯ ಚೀರಾಟದ ಧ್ವನಿ ಕೇಳಿ ಮಲಗಿದ್ದ ಮಕ್ಕಳು ಹೊರಗೆ ಬಂದು ನೋಡುವಷ್ಟರಲ್ಲಿ ಆಕೆ ರಕ್ತದ ಮಡುವಿನಲ್ಲೇ ಪ್ರಾಣ ಬಿಟ್ಟಿದ್ದಳು.
ಮೇ 15ರ ಮುಂಜಾನೆ ದೊಡ್ಡಬಳ್ಳಾಪುರ ತಾಲೂಕಿನ ವಡಗೆರೆ ಗ್ರಾಮದಲ್ಲಿ ನಡೆದ ಭೀಕರ ಕೊಲೆಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿತ್ತು. 35 ವರ್ಷದ ಭಾಗ್ಯಶ್ರೀ ಮನೆಯ ಮುಂಭಾಗದಲ್ಲಿ ಹೆಣವಾಗಿದ್ದರು. ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ದೊಡ್ಡಬೆಳವಂಗಲ ಪೊಲೀಸರಿಗೆ ಹಂತಕನ ಸುಳಿವು ಅದಾಗಲೇ ಸಿಕ್ಕಿತ್ತು. ಆದರೆ, ಆರೋಪಿ ಘಟನೆ ನಂತರ ಪರಾರಿಯಾಗಿದ್ದ. ಆರೋಪಿಯ ಬೆನ್ನಟ್ಟಿದ ಪೊಲೀಸರು ಘಟನೆಯಾದ 9 ನೇ ದಿನಕ್ಕೆ ರಾಯಚೂರಿನಲ್ಲಿ ಆರೋಪಿ ರಿಯಾಜ್ (27) ಎಂಬಾತನನ್ನು ಬಂಧಿಸಿ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಭಾಗ್ಯಶ್ರೀ ಮತ್ತು ರಿಯಾಜ್ ನಡುವೆ ಬೆಳೆದಿತ್ತು ನಂಟು:ಕೊಲೆಯಾದ ಭಾಗ್ಯಶ್ರೀ ಮತ್ತು ಆಕೆಯ ಗಂಡ ಚನ್ನಬಸವಯ್ಯ ಮನೆ ಮುಂದೆ ಅಂಗಡಿ ಹಾಕುವ ತೀರ್ಮಾನಕ್ಕೆ ಬಂದಿದ್ದರು. ಊರಿನ ವೆಲ್ಡಿಂಗ್ ಕೆಲಸಗಾರ ರಿಯಾಜ್ ಎಂಬಾತನನ್ನು ಕೆಲಸಕ್ಕೆ ಕರೆಸಿದ್ದಾರೆ. ಕೆಲಸ ಮಾಡುವ ನೆಪದಲ್ಲಿ ಭಾಗ್ಯಶ್ರೀ ಮತ್ತು ರಿಯಾಜ್ ನಡುವೆ ನಂಟು ಬೆಸೆದಿದೆ. ಇದೇ ನಂಟು ಇಬ್ಬರ ಅನೈತಿಕ ಸಂಬಂಧಕ್ಕೂ ದಾರಿ ಮಾಡಿ ಕೊಟ್ಟಿತ್ತು.