ಹೊಸಕೋಟೆ (ಬೆಂಗಳೂರು ಗ್ರಾ): ಗಂಡ ನೀಡುತ್ತಿದ್ದ ಮಾನಸಿಕ, ದೈಹಿಕ ಕಿರುಕುಳದಿಂದ ಮನನೊಂದ ಹೆಂಡತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸಕೋಟೆಯ ಅರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ದೀಪಾ ಎಂದು ಗುರುತಿಸಲಾಗಿದೆ.
ಅರಸನಹಳ್ಳಿ ಗ್ರಾಮದ ನಿವಾಸಿ ಮೋಹನ್ ಕುಮಾರ್ ಏಳು ವರ್ಷಗಳ ಹಿಂದೆ ಸಂಬಂಧಿಕರೊಬ್ಬರ ಮದುವೆಯಲ್ಲಿ ದೀಪಾರನ್ನು ಭೇಟಿಯಾಗಿದ್ದರು. ಬಳಿಕ ಪ್ರೀತಿಸಿ, ದೀಪಾಳ ಮನೆಯವರ ವಿರೋಧದ ನಡುವೆಯೂ ಮದುವೆಯಾಗಿದ್ದರು. ದಂಪತಿಗೆ ಒಂದು ಮಗು ಇದೆ. ಮದುವೆಯಾದ ಮೂರು ವರ್ಷಗಳವರೆಗೆ ದಂಪತಿ ಅನ್ಯೋನ್ಯವಾಗಿದ್ದರು. ಬಳಿಕ ಮನೋಜ್, ದೀಪಾ ವಿರುದ್ಧ ಅನೈತಿಕ ಸಂಬಂಧದ ಆರೋಪ ಹೊರಿಸಿ ಚಿತ್ರಹಿಂಸೆ ನೀಡಲು ಶುರು ಮಾಡಿದ್ದರಂತೆ. ಅಲ್ಲದೆ ವರದಕ್ಷಿಣೆ ನೀಡುವಂತೆಯೂ ಕಿರುಕುಳ ಕೊಡಲು ಆರಂಭಿಸಿದ್ದ ಎಂದು ದೀಪಾಳ ಕುಟುಂಬಸ್ಥರು ಆರೋಪಿಸಿದ್ದಾರೆ.