ಕರ್ನಾಟಕ

karnataka

By

Published : Sep 9, 2022, 8:08 PM IST

ETV Bharat / state

ಜನಸ್ಪಂದನ ಕಾರ್ಯಕ್ರಮದಲ್ಲಿ ಜೆ.ಪಿ.ನಡ್ಡಾ ಬದಲಿಗೆ ಸ್ಮೃತಿ ಇರಾನಿ ಭಾಗಿ!

ನಾಳೆ ಬಿಜೆಪಿ ಪಕ್ಷದ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡ ಬದಲಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾಗಿಯಾಗಲಿದ್ದಾರೆ.

kn_bng
ನಾಳೆ ಬಿಜೆಪಿ ಜನಸ್ಪಂದನ ಕಾರ್ಯಕ್ರಮ

ದೊಡ್ಡಬಳ್ಳಾಪುರ: ಪದೇ ಪದೇ ಮುಂದೂಡಿಕೆಯಾಗುತ್ತಿದ್ದ ಬಿಜೆಪಿ ಪಕ್ಷದ ಜನಸ್ಪಂದನ ಕಾರ್ಯಕ್ರಮ ನಾಳೆ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಸಾಧ್ಯತೆಗಳಿದ್ದು, ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ಹಿನ್ನೆಲೆ ಜನರನ್ನು ಕರೆತರಲು ರಾಜ್ಯಾದ್ಯಂತ 5 ಸಾವಿರ ಬಸ್​ಗಳನ್ನ ಬಿಡಲಾಗಿತ್ತು.

ನಾಳೆ ನಡೆಯುವ ಜನಸ್ಪಂದನ ಕುರಿತು ಕಾರ್ಯಕ್ರಮದ ವೇದಿಕೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್, ಛತ್ತೀಸ್ ಘಡದಲ್ಲಿ ರಾಷ್ಟ್ರಿಯ ಮಟ್ಟದ ಕಾರ್ಯಕ್ರಮದಲ್ಲಿ‌ ಜೆ.ಪಿ.ನಡ್ಡಾ ಭಾಗವಹಿಸುವುದು ಅನಿವಾರ್ಯ ಆಗಿರುವುದರಿಂದ ಅವರ ಆಗಮನ ಖಾತ್ರಿಯಾಗಿಲ್ಲ. ಬದಲಿಗೆ ಹಿರಿಯ ಕೇಂದ್ರ ಸಚಿವೆಯಾದ ಸ್ಮೃತಿ ಇರಾನಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ನಾಳೆ ಬಿಜೆಪಿ ಜನಸ್ಪಂದನ ಕಾರ್ಯಕ್ರಮ

ಜನಸ್ಪಂದನ ಕಾರ್ಯಕ್ರಮದಲ್ಲಿ ಸರ್ಕಾರದ ಮೂರು ವರ್ಷಗಳ ಸಾಧನೆಯ ರಿಪೋರ್ಟ್ ಕಾರ್ಡ್ ಜನರ‌ ಮುಂದಿಡುವುದು ಒಂದೆಡೆಯಾದರೆ, ದೊಡ್ಡಬಳ್ಳಾಪುರದಿಂದಲೇ 2023ರ ವಿಧಾನಸಭೆ‌ ಚುನಾವಣೆಗೆ ರಣಕಹಳೆ ಮೊಳಗಿಸಲಾಗುವುದು, ಪಕ್ಷ‌ ಸಂಘಟನೆಯೇ ಇಲ್ಲ ಎನ್ನುವ ಜಾಗದಲ್ಲಿ ಸವಾಲಾಗಿ ಸ್ವೀಕರಿಸಿ ನಮ್ಮ ಅಸ್ತಿತ್ವ ತೋರಿಸುವ ಪ್ರಯತ್ನವೇ ಜನಸ್ಪಂದನ ಕಾರ್ಯಕ್ರಮವಾಗಿದೆ. ಸಮಾವೇಶದಲ್ಲಿ ಒಟ್ಟು 3 ಲಕ್ಷ ಜನರು‌ ಭಾಗವಹಿಸಲಿದ್ದು, ಎಲ್ಲ ರೀತಿಯ ಸಿದ್ಧತೆ ಹಾಗೂ ವ್ಯವಸ್ಥೆ‌ ಮಾಡಲಾಗಿದೆ‌ ಎಂದು ಸಚಿವರು ತಿಳಿಸಿದರು.

ಆರು ವಲಯಗಳಲ್ಲಿ ಜನಸ್ಪಂದನ ಕಾರ್ಯಕ್ರಮ:ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದ ಎರಡು ವರ್ಷ, ಬಸವರಾಜ ಬೊಮ್ಮಾಯಿ ನೇತೃತ್ವದ ಒಂದು ವರ್ಷದ ಆಡಳಿತದಲ್ಲಿ ಸರ್ಕಾರ ಕೈಗೊಂಡ ಕಾರ್ಯಕ್ರಮಗಳನ್ನು ಜನರ ಮುಂದಿಡಲು ಜನಸ್ಪಂದನ‌ ನಡೆಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ, ತುಮಕೂರಿನ ಕೆಲ ಭಾಗ ಒಳಗೊಂಡಂತೆ ಮೊದಲ ವಲಯ ಮಟ್ಟದ ಜನಸ್ಪಂದನ ನಡೆಯುತ್ತಿದೆ. ಒಟ್ಟು ಆರು ವಲಯಗಳಲ್ಲಿ ಜನಸ್ಪಂದನ ನಡೆಯಲಿದ್ದು, ಅಂತಿಮವಾಗಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ನಡೆಯಲಿದೆ ಎಂದು ಸುಧಾಕರ್​ ಮಾಹಿತಿ ನೀಡಿದರು.

40 ಎಕರೆ ವಿಸ್ತೀರ್ಣದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ:40 ಎಕರೆ ವಿಸ್ತೀರ್ಣದಲ್ಲಿ‌ ಜರ್ಮನ್ ಶೆಡ್ ನಿರ್ಮಿಸಲಾಗಿದೆ. ಲಕ್ಷಾಂತರ ಜನರು ಭಾಗವಹಿಸುವ ಕಾರಣ ತಾತ್ಕಾಲಿಕ ಅಡುಗೆ ಮನೆ ನಿರ್ಮಿಸಲಾಗಿದೆ. ಎರಡು ದೊಡ್ಡ ಕಂಪೆನಿಗಳಿಗೆ ಕ್ಯಾಟರಿಂಗ್ ಗುತ್ತಿಗೆ ನೀಡಲಾಗಿದೆ. 3ಲಕ್ಷ ಜನರಿಗೆ ಊಟ ಸಿದ್ದವಾಗುತ್ತಿದ್ದು, ಪಲಾವ್, ಮೊಸರನ್ನ ಸೇರಿದಂತೆ ಸಿಹಿ ತಿಂಡಿಗಳನ್ನ ತಯಾರಿಸಲಾಗುತ್ತಿದೆ ಎಂದು ಹೇಳಿದರು.

200 ಎಕರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ:ಕಾರ್ಯಕ್ರಮ ನಡೆಯುವ ಸ್ಥಳದಿಂದ ಒಂದು ಕಿ.ಮೀ. ಅಂತರದಲ್ಲಿ ಎರಡೂ ಕಡೆ ಒಟ್ಟು 12 ಜಾಗಗಳಲ್ಲಿ 200 ಎಕರೆ ವಿಸ್ತೀರ್ಣದಲ್ಲಿ ಪಾರ್ಕಿಂಗ್ ವ್ಯವಸ್ಥೆ‌ ಮಾಡಲಾಗಿದೆ. ಜನರನ್ನು ಕರೆತರಲು ಒಟ್ಟು 5000 ಖಾಸಗಿ ಹಾಗೂ ಸರ್ಕಾರಿ ಬಸ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಎಲ್ಲಿಯೂ ಸಂಚಾರ ದಟ್ಟಣೆ ಉಂಟಾಗದಂತೆ ಟ್ರಾಫಿಕ್ ಡಿವಿಯೇಷನ್ ಮಾಡಲಾಗಿದೆ. ಈ ಕುರಿತು‌ ಪೊಲೀಸರೊಂದಿಗೆ ಸಭೆ ನಡೆಸಿ ಸೂಚನೆ ನೀಡಲಾಗಿದೆ ಎಂದು ಡಾ ಸುಧಾಕರ್​ ಹೇಳಿದರು.

ಇದನ್ನೂ ಓದಿ:ಬಿಜೆಪಿ ತೊರೆದು ಮಾತೃ ಪಕ್ಷಕ್ಕೆ ಮರಳಿದ ಮಾಜಿ ಶಾಸಕ ಹೆಚ್​​ ಆರ್​ ಗವಿಯಪ್ಪ

ABOUT THE AUTHOR

...view details