ಹೊಸಕೋಟೆ (ಬೆಂ. ಗ್ರಾಮಾಂತರ): ಇಲ್ಲಿನ ಮೂವರು ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಹೊಸಕೋಟೆಗೆ ಬಂದಿದ್ದ ಮೂವರಲ್ಲಿ ಕೊರೊನಾ ಸೋಂಕು - ಮಹಾರಾಷ್ಟ್ರದಿಂದ ಬಂದಿದ್ದ ಮೂವರಿಗೆ ಕೊರೊನಾ ಸುದ್ದಿ
ಹೊಸಕೋಟೆ ನಗರದ ನಿವಾಸಿಗಳಾದ 18 ವರ್ಷದ ಪುರುಷ (ರೋಗಿ ಸಂಖ್ಯೆ -9227) ಹಾಗೂ 39 ವರ್ಷದ ಮಹಿಳೆ (ಪಿ-9228) ಜೂನ್ 14 ರಂದು ಮಹಾರಾಷ್ಟ್ರದಿಂದ ಹಿಂದಿರುಗಿದ್ದರು. ಅಂದಿನಿಂದ ಇವರನ್ನು ಜಡಿಗೇನಹಳ್ಳಿಯ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಮೂವರಿಗೆ ಕೊರೊನಾ
ಹೊಸಕೋಟೆ ನಗರದ ನಿವಾಸಿಗಳಾದ 18 ವರ್ಷದ ಪುರುಷ (ಪಿ-9227) ಹಾಗೂ 39 ವರ್ಷದ ಮಹಿಳೆ (ಪಿ-9228) ಜೂನ್ 14 ರಂದು ಮಹಾರಾಷ್ಟ್ರದಿಂದ ವಾಪಸ್ಸು ಬಂದಿದ್ದರು. ಅಂದಿನಿಂದ ಜಡಿಗೇನಹಳ್ಳಿಯ ಮೊರಾರ್ಜಿ ದೇಸಾಯಿ ವಿದ್ಯಾರ್ಥಿ ನಿಲಯದಲ್ಲಿ ಇವರನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.
ಸೋಂಕು ಖಚಿತವಾದ ಕಾರಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.