ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿರೋ ಕನ್ನಮಂಗಲ ಗ್ರಾಮ ಪಂಚಾಯತ್ಗೆ ವಾರ್ಷಿಕ ತೆರಿಗೆ ಹಣವೇ ಕೋಟಿ ಕೋಟಿ ಹಣ ಹರಿದು ಬರುತ್ತದೆ. ಹೀಗೆ ಪಂಚಾಯತ್ಗೆ ಬಂದ ಹಣವನ್ನು ಬಿಲ್ ಕಲೆಕ್ಟರ್ವೊಬ್ಬರು ನುಂಗಿ ನೀರು ಕುಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಮಾನ ನಿಲ್ದಾಣ ಪಕ್ಕದಲ್ಲಿರುವ ಕನ್ನಮಂಗಲ ಪಂಚಾಯತ್ಗೆ ವಾರ್ಷಿಕ ಕೋಟ್ಯಂತರ ರೂ. ತೆರಿಗೆ ಹಣ ಬರುತ್ತದೆ. ವರ್ಷಕ್ಕೆ ಐದರಿಂದ 8 ಕೋಟಿ ರೂ. ಹಣ ವಸೂಲಿ ಆಗುತ್ತದೆ. ಆದ್ರೆ ತೆರಿಗೆ ವಸೂಲಿ ಮಾಡೋ ಬಿಲ್ ಕಲೆಕ್ಟರ್ ಮಂಜುನಾಥ್ ಎಂಬಾತ ಐದು ಕೋಟಿ 75 ಲಕ್ಷ ಹಣವನ್ನು ಗುಳುಂ ಮಾಡಿರೋ ಆರೋಪ ಕೇಳಿ ಬಂದಿದೆ. 2020-21ನೇ ಸಾಲಿನಲ್ಲಿ ಬಡಾವಣೆಗಳು, ಅಪಾರ್ಟ್ಮೆಂಟ್ಗಳು ಸೇರಿದಂತೆ ಇನ್ನಿತರೆ ಕಡೆಯಿಂದ ತೆರಿಗೆ ವಸೂಲಿ ಮಾಡಿದ್ದ ಹಣವನ್ನ ಸರ್ಕಾರದ ಖಜಾನೆಗೆ ಕಟ್ಟದೆ ವಂಚನೆ ಮಾಡಿದ್ದಾನೆ ಎನ್ನಲಾಗಿದ್ದು, ಬಿಲ್ ಕಲೆಕ್ಟರ್ ವಿರುದ್ಧ ಪಿಡಿಒ ಆದರ್ಶ್ ಎಂಬುವರು ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತೆರಿಗೆ ಹಣ ವಂಚನೆ ಕುರಿತು ಮಾಹಿತಿ ನೀಡಿದ ಕನ್ನಮಂಗಲ ಗ್ರಾಪಂ ಅಧ್ಯಕ್ಷ ಲಕ್ಷ್ಮೀ ಕಾಂತ್ ಇದನ್ನೂ ಓದಿ:ಕ್ಯಾಸಿನೋ ಆಡಲು ಗೋವಾಕ್ಕೆ ಕರೆದೊಯ್ದು ಮೋಸ ಆರೋಪ.. ವೀರೇಂದ್ರ ವಿರುದ್ಧ ಎಫ್ಐಆರ್
ಅಂದಹಾಗೆ, 2020-21ನೇ ಸಾಲಿನಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ಪಕ್ಷದ ಆಡಳಿತ ಪಂಚಾಯತಿಯಲ್ಲಿರಲಿಲ್ಲ. ಈ ವೇಳೆ ತಾಲೂಕು ಪಂಚಾಯತ್ ಅಧಿಕಾರಿಗಳೇ ಪಂಚಾಯತಿಯ ಆಡಾಳಿತಾಧಿಕಾರಿಯಾಗಿದ್ದರು. ಪಂಚಾಯತ್ನ 11 ಹಳ್ಳಿಗಳ ಬಡಾವಣೆ, ಮನೆಗಳು, ಲೇಔಟ್ಗಳಿಂದ ತೆರಿಗೆ ವಸೂಲಿಯನ್ನು ಬಿಲ್ ಕಲೆಕ್ಟರ್ ಮಾಡಿದ್ದನಂತೆ. ಅಂದು ತೆರಿಗೆಯನ್ನು ವಸೂಲಿ ಮಾಡಿದ್ದ ಬಿಲ್ ಕಲೆಕ್ಟರ್ ಮಂಜುನಾಥ್, ಸುಮಾರು 7 ತೆರಿಗೆ ವಸೂಲಿ ಬುಕ್ಗಳನ್ನೇ ನೀಡಿಲ್ಲವಂತೆ. ಮೊನ್ನೆಯಷ್ಟೇ ಪಂಚಾಯತ್ಗೆ ಹೊಸ ಅಧ್ಯಕ್ಷರು ಲಕ್ಷ್ಮೀಕಾಂತ ನೇಮಕವಾದಾಗ ಪಂಚಾಯತ್ ಆಡಿಟಿಂಗ್ಗೆ ಅಧಿಕಾರಿಗಳು ಬಂದಿದ್ದಾರೆ. ಈ ವೇಳೆ ತೆರಿಗೆ ವಸೂಲಾತಿ 7 ಬುಕ್ಗಳನ್ನ ಪಡೆದಿದ್ದ ಬಿಲ್ ಕಲೆಕ್ಟರ್ ವಾಪಸ್ ನೀಡಿಲ್ಲ ಅನ್ನೋದು ಗೊತ್ತಾಗಿದೆ. ಅದರ ಲೆಕ್ಕವಾಗಿ ಆಡಿಟಿಂಗ್ ಮಾಡಿದಾಗ ಬರೊಬ್ಬರಿ ಐದು ಕೋಟಿ ತೆರಿಗೆ ವಸೂಲಿ ಹಣ ವಂಚಿಸಲಾಗಿದೆ ಎಂದು ಪಿಡಿಒ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಸಾಲ ಕೊಡಿಸುವುದಾಗಿ ಪಂಗನಾಮ: ಮನೆ ಜಪ್ತಿಯ ಬ್ಯಾಂಕ್ ನೋಟಿಸ್ನಿಂದ ವಂಚನೆ ಬೆಳಕಿಗೆ
ಇನ್ನು ದೂರು ದಾಖಲಾಗುತ್ತಿದ್ದಂತೆ 7 ಬುಕ್ಗಳನ್ನು ತಾಲೂಕು ಪಂಚಾಯತ್ಗೆ ಬಿಲ್ ಕಲೆಕ್ಟರ್ ಹಾಜರುಪಡಿಸಿರೋದು ಗೊತ್ತಾಗಿದೆ. ಜತೆಗೆ ಈ ಹಿಂದೆಯೂ ಇದೇ ಪಂಚಾಯತ್ನಲ್ಲಿ ಕಂಪ್ಯೂಟರ್ ಆಪರೇಟರ್ವೊಬ್ಬರು ತೆರಿಗೆ ಬುಕ್ಗಳಲ್ಲಿ ಮಹಾವಂಚನೆ ಮಾಡಿ 9 ಲಕ್ಷ ಹಣ ಗುಳುಂ ಮಾಡಿದ್ದರು. ಇದೀಗ ಮತ್ತೆ ಪಂಚಾಯತ್ನಲ್ಲಿ ಕೋಟಿ ಕೋಟಿ ತೆರಿಗೆ ಹಣ ನಾಪತ್ತೆಯಾಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಅಧ್ಯಕ್ಷರಾಗಿರೋ ಲಕ್ಷ್ಮೀಕಾಂತ್ ಪಾರದರ್ಶಕವಾಗಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.