ಕರ್ನಾಟಕ

karnataka

ETV Bharat / state

ಆನೇಕಲ್: ಬಣ್ಣದ ಡೈಯಿಂಗ್‌ ಕಾರ್ಖಾನೆ ಮೇಲೆ ತಹಶೀಲ್ದಾರ್ ದಾಳಿ, ಶೆಡ್​ಗಳು ಧ್ವಂಸ - ಮಾಲಿನ್ಯ ಪರಿಸರ ಇಲಾಖೆಯಿಂದ ಅನುಮತಿ

ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಎಸ್​​.ಟಿ.ನಾರಾಯಣಸ್ವಾಮಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಶೆಡ್​​ಗಳನ್ನು ನಾಶಪಡಿಸಿದರು. ಮಾಲಿನ್ಯ ಪರಿಸರ ಇಲಾಖೆಯಿಂದ ಅನುಮತಿ ಪಡೆಯಲಾಗಿದ್ದು, ಡೈಯಿಂಗ್ ಯೂನಿಟ್ ಚಾಲನೆಗಾಗಲಿ ಅಥವಾ ಕೆಮಿಕಲ್ ನಿರ್ವಹಣೆಗಾಗಲಿ ಅನುಮತಿಯಿರಲಿಲ್ಲ. ಹೀಗಾಗಿ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

Tahsildar attack on colored dyeing factory in anekal
ಬಣ್ಣದ ಡೈಯಿಂಗ್‌ ಕಾರ್ಖಾನೆ ಮೇಲೆ ತಹಶೀಲ್ದಾರ್ ದಾಳಿ

By

Published : Jan 30, 2021, 4:28 PM IST

ಆನೇಕಲ್:ತಮಿಳುನಾಡಿನಲ್ಲಿ‌ ನಿಷೇಧಿತಗೊಂಡ ಬಣ್ಣದ ಡೈಯಿಂಗ್ ಅಕ್ರಮ ಕಾರ್ಖಾನೆಗಳನ್ನು ರಾಜ್ಯದ ಗಡಿಯಲ್ಲಿ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್ ಸಿ.ಮಹದೇವಯ್ಯ ನೇತೃತ್ವದ ತಂಡ ದಾಳಿ ನಡೆಸಿ ಮೂರು ಶೆಡ್​​ಗಳನ್ನು ನಾಶಗೊಳಿಸಿದೆ.

ಬಣ್ಣದ ಡೈಯಿಂಗ್‌ ಕಾರ್ಖಾನೆ ಮೇಲೆ ತಹಶೀಲ್ದಾರ್ ದಾಳಿ

ಓದಿ: ಫ್ರೀಡಂ ಪಾರ್ಕ್​ನಲ್ಲಿ ರೈತ ಮುಖಂಡರಿಂದ ಉಪವಾಸ ಸತ್ಯಾಗ್ರಹ: ಸಿದ್ದರಾಮಯ್ಯ ಸಾಥ್

ಸರ್ಜಾಪುರ ಭಾಗದ ಗುಡಿಗಟ್ಟಹಳ್ಳಿ ಸರ್ವೆ ನಂ. 123/124ರ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀರಾಮುಲು ಎಂಬುವರಿಗೆ ಸೇರಿದ ಇಟ್ಟಿಗೆ ಕಾರ್ಖಾನೆಯಲ್ಲಿ ನಡೆಯುತ್ತಿದ್ದ ಡೈಯಿಂಗ್ ಒಂಭತ್ತು ಯಂತ್ರಗಳ ಸಮೇತ ಇಟ್ಟಿಗೆ ಶೆಡ್​​​ಗಳನ್ನು ಧ್ವಂಸಗೊಳಿಸಲಾಯಿತು.

ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಎಸ್​​.ಟಿ.ನಾರಾಯಣಸ್ವಾಮಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಶೆಡ್​​ಗಳನ್ನು ಧ್ವಂಸ ಮಾಡಿದರು. ಮಾಲಿನ್ಯ ಪರಿಸರ ಇಲಾಖೆಯಿಂದ ಅನುಮತಿ ಪಡೆಯಲಾಗಿದ್ದು, ಡೈಯಿಂಗ್ ಯೂನಿಟ್ ಚಾಲನೆಗಾಗಲಿ ಅಥವಾ ಕೆಮಿಕಲ್ ನಿರ್ವಹಣೆಗಾಗಲಿ ಅನುಮತಿಯಿರಲಿಲ್ಲ. ಹೀಗಾಗಿ ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ ಕಾರ್ಯಾಚರಣೆ ನಡೆಸಿದ್ದಾರೆ.

ರಾತ್ರಿ ಎರಡನೇ ಹಂತದಲ್ಲಿ ಲಕ್ಷ್ಮಣಪ್ಪ ಎಂಬುವವರಿಗೆ ಮಟ್ನಹಳ್ಳಿ ಗ್ರಾಮ ಸರ್ವೆ ನಂ. 90ರಲ್ಲಿ ಅಕ್ರಮ ಡೈಯಿಂಗ್ ಯೂನಿಟ್​​ಗಳನ್ನು ಮೂರು ಜೆಸಿಬಿಗಳ ಮುಖಾಂತರ ನೆಲಸಮಗೊಳಿಸಲಾಯಿತು. ಒಟ್ಟು ಹದಿನೈದು ಯಂತ್ರಗಳನ್ನು ಹಾಗೂ ಶೆಡ್​​ಗಳನ್ನು ಧ್ವಂಸಗೊಳಿಸಲಾಗಿದೆ.

ABOUT THE AUTHOR

...view details