ಕರ್ನಾಟಕ

karnataka

By

Published : Apr 28, 2020, 8:13 PM IST

ETV Bharat / state

ಸಾವಿನ ಸುತ್ತ ಅನುಮಾನದ ಹುತ್ತ... ಹೂತಾಕಿದ್ದ ಬಾಲಕನ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ!

ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಸ್ನೇಹಿತರ ಜೊತೆ ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ  ಸಾವನ್ನಪ್ಪಿದ್ದ. ಈ ಸಾವಿನ ಕುರಿತು ಅನುಮಾನ ಬಂದ ಹಿನ್ನೆಲೆ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿರುವ ಪ್ರಕರಣ ದೊಡ್ಡಬಳ್ಳಾಪುರ ತಾಲೂಕಲ್ಲಿ ನಡೆದಿದೆ.

corpse examination of a boy who was buried
ಹೂತ್ತಿದ್ದ ಬಾಲಕನ ಶವ ಹೊರ ತೆಗೆದು ಶವ ಪರೀಕ್ಷೆ

ದೊಡ್ಡಬಳ್ಳಾಪುರ:ಸ್ನೇಹಿತರ ಜೊತೆ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಬಾಲಕನ ಸಾವು ಅನುಮಾನಾಸ್ಪದವೆಂದು ದೂರು ಬಂದ ಹಿನ್ನೆಲೆ ಹೂತಿದ್ದ ಶವ ಹೊರತೆಗೆದು ತಹಶೀಲ್ದಾರ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು.

ಸಾವಿನ ಸುತ್ತ ಅನುಮಾನದ ಹುತ್ತ... ಹೂತಿದ್ದ ಬಾಲಕನ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ
ತಾಲೂಕಿನ ಕೊನಘಟ್ಟ ಗ್ರಾಮದ ಕೆರೆಯಲ್ಲಿ ಮೀನು ಹಿಡಿಯಲು ಸ್ನೇಹಿತರ ಗುಂಪಿನಲ್ಲಿ ಮದನ್ ಗೌಡ(08) ಎಂಬಾತ ತೆರಳಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ. ಮೃತ ಬಾಲಕನ ಸಂಬಂಧಿಕರು ಪೊಲೀಸರ ಗಮನಕ್ಕೂ ತಿಳಿಸದೆ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದರು.

ಆದ್ರೆ, ಕೆರೆಯ ಮೀನು ಹಿಡಿಯುವ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಬಾಲಕನ ಸಾವು ಅನುಮಾನಾಸ್ಪದವೆಂದು ಉಪ ವಿಭಾಗಾಧಿಕಾರಿಯವರಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ತಹಶೀಲ್ದಾರ್ ಶಿವರಾಜ್ ನೇತೃತ್ವದಲ್ಲಿ ವೈದ್ಯರ ತಂಡದಿಂದ ಶವ ಪರೀಕ್ಷೆ ನಡೆಸಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details