ದೊಡ್ಡಬಳ್ಳಾಪುರ : ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿದ್ದ ನಗರದ ಕರಗ ಉತ್ಸವವನ್ನು ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ಆಚರಿಸಲಾಯಿತು.
ದೊಡ್ಡಬಳ್ಳಾಪುರದಲ್ಲಿ ಸರಳವಾಗಿ ನೆರವೇರಿದ ಕರಗ ಉತ್ಸವ - ದೊಡ್ಡಬಳ್ಳಾಪುರದಲ್ಲಿ ಕರಗ ಉತ್ಸವ
ಪ್ರತಿ ವರ್ಷ ಸಡಗರ ಸಂಭ್ರಮದಿಂದ ನಡೆಯುತ್ತಿದ್ದ ದೊಡ್ಡಬಳ್ಳಾಪುರ ನಗರದ ಕರಗ ಉತ್ಸವವನ್ನು ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ಆಚರಣೆ ಮಾಡಲಾಯಿತು.
ವಹ್ನಿಕುಲ ಕ್ಷತ್ರಿಯ ಸಮುದಾಯದವರು ತಮ್ಮ ಆರಾಧ್ಯ ದೈವ ಶ್ರೀ ಸಪ್ತಮಾತೃಕ ಮಾರಿಯಮ್ಮ ದೇವಿಯ ಕರಗ ಉತ್ಸವವನ್ನು ಪ್ರತಿ ವರ್ಷ ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದರು. ಈ ಬಾರಿ ಕೊರೊನಾ ಹಿನ್ನೆಲೆ ಜಿಲ್ಲಾಡಳಿತದ ಅನುಮತಿಯೊಂದಿಗೆ ಸರಳವಾಗಿ ಆಚರಣೆ ಮಾಡಿದರು. ಒಂದು ಸಲ ಕರಗ ಆಚರಣೆ ಮಾಡದಿದ್ದಲ್ಲಿ ಮುಂದಿನ ಮೂರು ವರ್ಷ ಆಚರಣೆ ಮಾಡಬಾರದು ಎಂಬ ನಿಯಮವಿದೆ. ಹೀಗಾಗಿ ಸಮುದಾಯದ ಮುಖಂಡರು ಸರಳ ಕರಗ ಉತ್ಸವ ನೆರವೇರಿಸಿದರು.
ಪ್ರತಿ ವರ್ಷ ಕರಗ ಮಹೋತ್ಸವದ ದಿನ ಇಡೀ ನಗರವೇ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು. ಮಧ್ಯರಾತ್ರಿ ಉತ್ಸವ ಶುರುವಾಗಿ ಮರುದಿನ ಮಧ್ಯಾಹ್ನದವರೆಗೂ ನಡೆಯುತ್ತಿತ್ತು. ಈ ಬಾರಿ ಮುಂಜಾನೆ 3 ಗಂಟೆಗೆ ಶುರುವಾದ ಕರಗ ಉತ್ಸವ 4 ಗಂಟೆಗೆ ಮುಕ್ತಾಯವಾಯಿತು.