ನೆಲಮಂಗಲ:ಹೆಲ್ಮೆಟ್ ಧರಿಸಿ ಮತ್ತು ಸಂಪೂರ್ಣ ದಾಖಲೆಯೊಂದಿಗೆ ಸಂಚರಿಸುತ್ತಿದ್ದ ಬೈಕ್ ಸವಾರಿಗೆ ಸಸಿ ನೀಡುವ ಮೂಲಕ ರಸ್ತೆ ಸುರಕ್ಷತೆ ಮತ್ತು ಪರಿಸರ ಕಾಳಜಿಯ ಬಗ್ಗೆ ಆರ್.ಟಿ.ಒ ಅಧಿಕಾರಿಗಳು ಅರಿವು ಮೂಡಿಸುವ ಕೆಲಸ ಮಾಡಿದ್ರು.
ರಸ್ತೆ ಸುರಕ್ಷತೆ, ಪರಿಸರ ಕಾಳಜಿ: ಸವಾರರಿಗೆ ಗಿಡ ಕೊಟ್ಟ ಆರ್ಟಿಒ ಅಧಿಕಾರಿಗಳು - kannada news
ಹೆಲ್ಮೆಟ್ ಧರಿಸಿ ಮತ್ತು ಸಂಪೂರ್ಣ ದಾಖಲೆಯೊಂದಿಗೆ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ಸಸಿ ನೀಡುವ ಮೂಲಕ ರಸ್ತೆ ಸುರಕ್ಷತೆ ಮತ್ತು ಪರಿಸರ ಕಾಳಜಿಯ ಬಗ್ಗೆ ಆರ್.ಟಿ.ಒ ಅಧಿಕಾರಿಗಳು ಜಾಗೃತಿ ಮೂಡಿಸಿದ್ರು.
ನೆಲಮಂಗಲ ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಪರಿಸರ ಕಾಳಜಿ ಮತ್ತು ರಸ್ತೆ ಸುರಕ್ಷಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಹೆಲ್ಮೆಟ್ ಧರಿಸಿ ಮತ್ತು ಡಿ.ಎಲ್, ಇನ್ಶೂರೆನ್ಸ್ ಸೇರಿದಂತೆ ಸೂಕ್ತ ದಾಖಲೆ ಹೊಂದಿದ ದ್ವಿಚಕ್ರ ವಾಹನ ಸವಾರರಿಗೆ ಆರ್ಟಿಒ ಅಧಿಕಾರಿಗಳು ಸಸಿಗಳನ್ನು ನೀಡಿದ್ರು.
ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಡಾ. ಡಿ.ಎಸ್. ಒಡೆಯರ್ ನೇತೃತ್ವದಲ್ಲಿ ರಸ್ತೆ ಸುರಕ್ಷಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಸೂಕ್ತ ದಾಖಲೆ ಮತ್ತು ಹೆಲ್ಮೆಟ್ ಧರಿಸದೇ ಇದ್ದ ದ್ವಿಚಕ್ರ ವಾಹನ ಸವಾರರಿಗೆ ಸ್ಥಳದಲ್ಲೇ ದಂಡ ಹಾಕಿ, ಅವರ ಕೈಗೊಂದು ಗಿಡ ಕೊಟ್ಟು ತಪ್ಪು ಮಾಡದಂತೆ ಬುದ್ದಿವಾದ ಹೇಳಿದರು.