ದೇವನಹಳ್ಳಿ: ಮಂತ್ರಾಲಯಕ್ಕೆ ಹೋಗಲೆಂದು ಸ್ನೇಹಿತರ ಮನೆಗೆ ಹೋಗುವಾಗ ರಸ್ತೆ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದಾರೆ.
ಮಂತ್ರಾಲಯಕ್ಕೆ ಹೊರಟ ದಂಪತಿ ರಸ್ತೆ ಅಪಘಾತದಲ್ಲಿ ದುರ್ಮರಣ - ದಂಪತಿ ರಸ್ತೆ ಅಪಘಾತದಲ್ಲಿ ದುರ್ಮರಣ
ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ರಸ್ತೆ ಅಪಘಾತದಲ್ಲಿ ದಂಪತಿ ದುರ್ಮರಣಕ್ಕೆ ಈಡಾಗಿದ್ದಾರೆ.
ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ಮುಂಜಾನೆ 6:30ಕ್ಕೆ ಘಟನೆ ನಡೆದಿದ್ದು, ಅಪಘಾತದಲ್ಲಿ ದಂಪತಿಗಳಾದ ಮಂಜುನಾಥ್ (55) ಸುಜಾತ (50) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ದಂಪತಿ ಹೊಸಕೋಟೆಯಲ್ಲಿ ಸ್ನೇಹಿತರ ಮನೆಗೆ ಹೋಗಿ ಅಲ್ಲಿಂದ ಮಂತ್ರಾಲಯಕ್ಕೆ ಹೋಗುವವರಿದ್ದು, ಊರಿನಿಂದ ಹೊಸಕೋಟೆಗೆ ಬೈಕ್ನಲ್ಲಿ ಹೋಗುವಾಗ ಅಪರಿಚಿತ ವಾಹನ ದಂಪತಿಗಳ ಮೇಲೆ ಹರಿದಿದೆ. ಅಪಘಾತದ ತೀವ್ರತೆಗೆ ದಂಪತಿಗಳ ದೇಹ ರಸ್ತೆಯಲ್ಲಿ ಛಿಧ್ರವಾಗಿದೆ. ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ : ಧಾರವಾಡ ಬಳಿ ಟೆಂಪೋಗೆ ಟಿಪ್ಪರ್ ಡಿಕ್ಕಿ: ಭೀಕರ ಅಪಘಾತದಲ್ಲಿ 11 ಜನ ಸಾವು