ಕರ್ನಾಟಕ

karnataka

ETV Bharat / state

ಟ್ರಯಲ್ ನೋಡಿ ಬರುತ್ತೇನೆಂದು ಕಾರಿನೊಂದಿಗೆ ಪರಾರಿಯಾದ ಖದೀಮ ಅರೆಸ್ಟ್​

ಕಾರು ಖರೀದಿ ಮಾಡುವುದಾಗಿ ನಂಬಿಸಿ 10 ಸಾವಿರ ರೂ. ಅಡ್ವಾನ್ಸ್ ಹಣ ನೀಡಿ, ಟ್ರಯಲ್ ನೋಡಿ ಬರುತ್ತೇನೆಂದು ಹೇಳಿ ಕಾರಿನೊಂದಿಗೆ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

arrest
arrest

By

Published : Aug 6, 2021, 7:36 AM IST

ನೆಲಮಂಗಲ: ಕಾರು ಖರೀದಿ ಮಾಡುವ ನೆಪದಲ್ಲಿ ಅಡ್ವಾನ್ಸ್ ಹಣ ನೀಡಿ ಟ್ರಯಲ್​ಗೆ ಕಾರು ಪಡೆದು ಎಸ್ಕೇಪ್ ಆಗಿದ್ದ ಆರೋಪಿಯನ್ನು ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ.

ಆಪಲ್ ಮಂಜ (35) ಕಾರಿನೊಂದಿಗೆ ಪರಾರಿಯಾಗಿದ್ದ ಆರೋಪಿ. ಬೆಂಗಳೂರಿನ ಕಲ್ಯಾಣನಗರದ ಕೆಕೆಹಳ್ಳಿ ನಿವಾಸಿಯಾಗಿರುವ ಶಿವಕುಮಾರ್ ಎಂಬುವರು ಅವರ ತಂಗಿಯ ಮಹೇಂದ್ರ ಎಕ್ಸ್ ಯುವಿ 500 ಕಾರನ್ನು ಮಾರಾಟಕ್ಕೆ ಇಟ್ಟಿದ್ರು. ಈ ಕುರಿತು ಮಾಹಿತಿ ತಿಳಿದ ನೆಲಮಂಗಲ ನಗರದ ಸೊಂಡೆಕೊಪ್ಪ ಸರ್ಕಲ್ ನಿವಾಸಿ ಮಂಜುನಾಥ್ ಅಲಿಯಾಸ್ ಆಪಲ್ ಮಂಜು, ಶಿವಕುಮಾರ್ ಅವರಿಗೆ ಫೋನ್ ಮಾಡಿ ಕಾರು ಖರೀದಿಸುವುದಾಗಿ ಹೇಳಿದ್ದಾನೆ.

ಆಪಲ್ ಮಂಜನಿಗೆ ಕಾರು ತೋರಿಸಲು ಮೇ.30 ರಂದು ಶಿವಕುಮಾರ ಕುಣಿಗಲ್ ಕ್ರಾಸ್​ಗೆ ಕಾರಿನ ಸಮೇತ ಬಂದಿದ್ದಾನೆ. ಶಿವಕುಮಾರ್​ಗೆ 10 ಸಾವಿರ ಅಡ್ವಾನ್ಸ್ ಹಣ ನೀಡಿದ ಆರೋಪಿ, ಕುಣಿಗಲ್ ಬೈಪಾಸ್ ವರೆಗೂ ಟ್ರಯಲ್ ಮಾಡುವುದಾಗಿ ಹೇಳಿ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ. ವಾಪಸ್ ಬರದಿರುವುದನ್ನು ಗಮನಿಸಿದ ಶಿವಕುಮಾರ, ಆತನಿಗೆ ಪೋನ್ ಮಾಡಿದ್ದಾರೆ. ಈ ವೇಳೆ ನಿಮ್ಮ ಮನೆಯ ಬಳಿಯೇ ಕಾರು ತರುತ್ತೇನೆ, ಉಳಿದ ಹಣವನ್ನು ನೀಡುತ್ತೇನೆ ಎಂದು ಯಾಮಾರಿಸಿ ಕಾರನ್ನು ಎಸ್ಕೇಪ್ ಮಾಡಿದ್ದ.

ಮಂಜ ಫೋನ್ ಸ್ವಿಚ್​ಆಫ್ ಮಾಡಿದ ನಂತರ ಕಾರು ಮಾಲೀಕರಾದ ಶಿವಕುಮಾರ್ ನೆಲಮಂಗಲ ಟೌನ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಮಂಜುನಾಥ್​ನನ್ನು ಬಂಧಿಸಿ, ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈತ ದಾಬಸ್ ಪೇಟೆ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಸಹ ಕೆಲವು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ABOUT THE AUTHOR

...view details