ಕರ್ನಾಟಕ

karnataka

ETV Bharat / state

ನ್ಯಾಯಬೆಲೆ ಅಂಗಡಿಗಳ ಎದುರು ಜನದಟ್ಟಣೆ: ಸೋಂಕು ಹರಡುವ ಭೀತಿ

ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ 6ರಿಂದ 10 ಗಂಟೆಯವರೆಗೂ ಪಡಿತರ ವಿತರಣೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಜನರು ತಮ್ಮ ಪಾಲಿನ ರೇಷನ್ ತೆಗೆದುಕೊಳ್ಳಲು ಬೆಳಗ್ಗೆ 4 ಗಂಟೆಯಿಂದಲೇ ರೇಷನ್ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ಕಾದು ನಿಲ್ಲುತ್ತಾರೆ. ಹಾಗಾಗಿ ಸೋಂಕು ಹರಡುವ ಭೀತಿ ಎದುರಾಗಿದೆ.

people gathering in front of ration shops
ನ್ಯಾಯ ಬೆಲೆ ಅಂಗಡಿ ಎದುರು ಜನದಟ್ಟಣೆ

By

Published : May 18, 2021, 11:46 AM IST

ದೊಡ್ಡಬಳ್ಳಾಪುರ: ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ರೇಷನ್ ತೆಗೆದುಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಕೊರೊನಾ ಹಾಟ್ ಸ್ಪಾಟ್ ಆಗುವ ಆತಂಕ ಸೃಷ್ಟಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಯಲ್ಲಿ ಪಡಿತರ ವಿತರಣೆ ಆರಂಭವಾಗಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಬೆಳಗ್ಗೆ 6ರಿಂದ 10 ಗಂಟೆಯವರೆಗೂ ಪಡಿತರ ವಿತರಣೆಗೆ ಅವಕಾಶ ನೀಡಲಾಗಿದೆ. ಇರುವ 4 ತಾಸಿನಲ್ಲಿ ಪಡಿತರವನ್ನು ವಿತರಣೆ ಮಾಡಬೇಕಿದೆ. ಇದರಿಂದ ಜನರು ತಮ್ಮ ಪಾಲಿನ ರೇಷನ್ ತೆಗೆದುಕೊಳ್ಳಲು ಬೆಳಗ್ಗೆ 4 ಗಂಟೆಯಿಂದಲೇ ರೇಷನ್ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.

ನ್ಯಾಯಬೆಲೆ ಅಂಗಡಿ ಎದುರು ಜನದಟ್ಟಣೆ

ಆಧಾರ್ ಕಾರ್ಡ್​ನಲ್ಲಿ ಮೊಬೈಲ್ ನಂಬರ್ ನೋಂದಣಿ ಕಡ್ಡಾಯ ಮಾಡಲಾಗಿದ್ದು, ಮೊಬೈಲ್ ನಂಬರ್ ಇಲ್ಲದವರಿಗೆ ಥಂಬ್​ ಇಂಪ್ರೆಷನ್ ಮಾಡಿಕೊಂಡೇ ರೇಷನ್ ನೀಡಲಾಗುತ್ತಿದೆ. ಆದರೆ ಇದರ ಬಗ್ಗೆ ಮಾಹಿತಿ ಇಲ್ಲದೇ ಆಧಾರ್ ಕಾರ್ಡ್ ತರದೇ ಇರೋರಿಗೆ ರೇಷನ್ ನೀಡುತ್ತಿಲ್ಲ. ಸರ್ಕಾರ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ತೆಗೆದುಕೊಳ್ಳಲು ಅನುಮತಿ ನೀಡಿರುವುದರಿಂದ ಕೆಲವೊಂದು ನ್ಯಾಯಬೆಲೆ ಅಂಗಡಿಯಲ್ಲಿ ಐದಾರು ಊರುಗಳ ಜನರು ಸಹ ಬಂದು ನಿಲ್ಲುವ ಘಟನೆ ನಡೆದಿದೆ. ಇದರ ಜತೆ ಬೆಂಗಳೂರಿನಿಂದ ಬಂದವರು ಸಹ ರೇಷನ್​ಗಾಗಿ ಕಾಯುತ್ತಿದ್ದಾರೆ.

ತಮ್ಮ ಅಂಗಡಿಯಲ್ಲಿ ನೋಂದಾಯಿತ ರೇಷನ್ ಕಾರ್ಡ್​ದಾರರಿಗೆ ಮೊದಲು ರೇಷನ್ ಕೊಟ್ಟು ನಂತರ ಉಳಿದವರಿಗೆ ರೇಷನ್ ಕೊಡಲಾಗುವುದೆಂದು ಸಿಬ್ಬಂದಿ ಹೇಳುತ್ತಾರೆ. ಈ ವಿಚಾರಕ್ಕೆ ಜಗಳ ಸಹ ನಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ನೆಟ್​ವರ್ಕ್ ಸಮಸ್ಯೆಯಿಂದ ಸರ್ವರ್ ಕೈ ಕೊಡುತ್ತಿದೆ. ಮೊಬೈಲ್​ಗಳಿಗೆ ಒಟಿಪಿ ಬರುವುದು ತಡವಾಗುತ್ತಿರುವುದರಿಂದ ಪಡಿತರ ವಿತರಣೆ ವಿಳಂಬವಾಗುತ್ತಿದೆ. ಇದರಿಂದ ಸಾಲಿನಲ್ಲಿ ಜನರು ಕಾಯಬೇಕಾದ ಪರಿಸ್ಥಿತಿ ಇದೆ.

ಇದನ್ನೂ ಓದಿ:ಕೊರೊನಾ ತಂದ ಕಂಟಕ: ತಂದೆ-ತಾಯಿ ಕಳೆದುಕೊಂಡು ಅನಾಥವಾದ ಇಬ್ಬರು ಹೆಣ್ಣು ಮಕ್ಕಳು

ಜನರ ದಟ್ಟಣೆಯಾಗುವುದರಿಂದ ಕೊರೊನಾ ಹರಡುವ ಭಯ ಸಹ ಜನರನ್ನು ಕಾಡುತ್ತಿದೆ. 4 ತಾಸಿನೊಳಗೆ ರೇಷನ್ ತೆಗೆದುಕೊಳ್ಳಬೇಕೆಂಬ ಕಾರಣಕ್ಕೆ ತಮಗೆಲ್ಲಿ ಈ ತಿಂಗಳು ರೇಷನ್ ಸಿಗುವುದಿಲ್ಲವೆಂಬ ಭಯದಿಂದ ರೇಷನ್ ಅಂಗಡಿಯ ಮುಂದೆ ಜನರ ದಟ್ಟಣೆಯಾಗುತ್ತಿದ್ದು, ಸೋಂಕು ಮತ್ತಷ್ಟು ಹರಡುವ ಭೀತಿ ಎದುರಾಗಿದೆ.

ABOUT THE AUTHOR

...view details