ಕರ್ನಾಟಕ

karnataka

ETV Bharat / state

ಒಂದೇ ಬೈಕ್​ನಲ್ಲಿ ನಾಲ್ವರ ಜಾಲಿ ರೈಡ್​​: ಚೇಸ್​ ಮಾಡಿ ಚಳಿ ಬಿಡಿಸಿದ ಪೊಲೀಸರು! - ದೊಡ್ಡಬಳ್ಳಾಪುರ

ಒಂದೇ ಬೈಕ್​​ನಲ್ಲಿ ಜಾಲಿ ರೈಡ್ ಹೊರಟಿದ್ದ ನಾಲ್ವರು ಕಾಲೇಜ್ ಹುಡುಗರನ್ನ 2 ಕಿ.ಮೀ. ಚೇಸಿಂಗ್ ಮಾಡಿದ ಪೊಲೀಸರು ಡಂಡ ವಸೂಲಿ ಮಾಡಿ ಚಳಿ ಬಿಡಿಸಿದ್ದಾರೆ.

ಒಂದೇ ಬೈಕ್​ನಲ್ಲಿ ನಾಲ್ವರ ಜಾಲಿರೈಡ್

By

Published : Jul 18, 2019, 11:13 PM IST

ದೊಡ್ಡಬಳ್ಳಾಪುರ: ಒಂದೇ ಬೈಕ್​ನಲ್ಲಿ ಜಾಲಿ ರೈಡ್ ಹೊರಟಿದ್ದ ನಾಲ್ವರು ಕಾಲೇಜ್ ಹುಡುಗರನ್ನ 2 ಕಿ.ಮೀ. ಚೇಸಿಂಗ್ ಮಾಡಿದ ಪೊಲೀಸರು ಡಂಡ ವಸೂಲಿ ಮಾಡಿ ಚಳಿ ಬಿಡಿಸಿದ್ದಾರೆ.


ನಗರ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಮಾಡುವ ಸವಾರರಿಗೆ ಬ್ರೇಕ್ ಹಾಕುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ನಾಲ್ವರು ಕಾಲೇಜ್ ಹುಡುಗರು ಬೈಕ್​ಗೆ ಸೈಲನ್ಸರ್ ಅಲ್ಟ್ರೇಷನ್ ಮಾಡಿಸಿಕೊಂಡು ನಂಬರ್ ಪ್ಲೇಟ್ ಇಲ್ಲದೆ ಜನನಿಬಿಡ ಪ್ರದೇಶದಲ್ಲಿ ತೆರಳುತ್ತಿದ್ದರು.

ಇನ್ನು ಈ ಹುಡುಗರ ಬೆನ್ನತ್ತಿದ್ದ ನಗರ ಪೊಲೀಸರು, ಸುಮಾರು ಎರಡು ಕಿಲೋ ಮೀಟರ್ ಚೇಸ್​ ಮಾಡಿ ದಾಖಲೆ ಇಲ್ಲದ ಗಾಡಿಯನ್ನ ವಶಕ್ಕೆ ಪಡೆದಿದ್ದಾರೆ. ಇತ್ತೀಚಿಗೆ ಪೋಲಿ ಹುಡುಗರ ಜಾಲಿ ರೈಡ್​ನಿಂದ ಅಮಾಯಕ ಜೀವಗಳು ಬಲಿಯಾಗುತ್ತಿದ್ವು. ನಾಲ್ವರು ಹುಡುಗರನ್ನ ಬೆನ್ನತ್ತಿ ಹಿಡಿದ ಪೊಲೀಸರು, ಹುಡುಗರಿಗೆ ಎಚ್ಚರಿಕೆ ನೀಡಿದ್ದಾರೆ.


ABOUT THE AUTHOR

...view details