ದೊಡ್ಡಬಳ್ಳಾಪುರ :ಬಿಜೆಪಿಯದ್ದು ಡಬಲ್ ಇಂಜಿನ್ ಸರ್ಕಾರ. ಆದರೆ, ಕಾಂಗ್ರೆಸ್ ಪಕ್ಷದ್ದು ಡಬಲ್ ಸ್ಟೇರಿಂಗ್ ಪಕ್ಷ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಬಣಗಳ ಒಳಜಗಳವೇ ಕಾಂಗ್ರೆಸ್ಗೆ ಮುಳುವಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರದ ಬಳಿ ಜನೋತ್ಸವ ಕಾರ್ಯಕ್ರಮದ ಕುರಿತು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜು ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷ ಪೂರೈಸಿದ ಹಿನ್ನೆಲೆ ಜನೋತ್ಸವ ಕಾರ್ಯಕ್ರಮ ಮಾಡಲಾಗುತ್ತಿದೆ. ಸರ್ಕಾರಿದಿಂದ ಸವಲತ್ತು ಪಡೆದಿರುವ ಫಲಾನುಭವಿಗಳ ಒತ್ತಾಯ ಮತ್ತು ಕಾರ್ಯಕರ್ತರ ಬೇಡಿಕೆಯಂತೆ ಕಾರ್ಯಕ್ರಮದ ಸಿದ್ದತೆ ನಡೆದಿದೆ. ಈ ಕಾರ್ಯಕ್ರಮ ಜನರ ಉತ್ಸವವಾಗಲಿದೆ ಹೊರತು ವ್ಯಕ್ತಿಯನ್ನ ವೈಭವೀಕರಿಸುವ ಕಾರ್ಯಕ್ರಮವಲ್ಲ, ಜನತೆಯೇ ಜನಾರ್ದನ ಎಂಬ ನಾಣ್ಣುಡಿಯಂತೆ ಜನೋತ್ಸವ ರೂಪುಗೊಂಡಿದೆ ಎಂದರು.
ನಮ್ಮದು ಡಬಲ್ ಇಂಜಿನ್ ಸರ್ಕಾರ, ಕಾಂಗ್ರೆಸ್ ಡಬಲ್ ಸ್ಟೇರಿಂಗ್ ಪಕ್ಷ: ಸಚಿವ ಸುಧಾಕರ್ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷಕ್ಕೆ ನೆಲೆ ಇಲ್ಲವೆಂಬ ಅಭಿಪ್ರಾಯ ಇದೆ. ಈ ಎಲ್ಲ ಪ್ರಶ್ನೆಗಳಿಗೆ ಈ ಕಾರ್ಯಕ್ರಮ ಉತ್ತರ ಕೊಡಲಿದೆ. ಕಾಮನ್ ಮ್ಯಾನ್ ಚೀಫ್ ಮಿನಿಸ್ಟರ್ ಬಸವರಾಜ್ ಬೊಮ್ಮಾಯಿ ಆತ್ಯಂತ ತರ್ಕವಾದ, ವೈಜ್ಞಾನಿಕ ನೆಲಗಟ್ಟಿನಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ಒಂದು ವರ್ಷದ ರಿಪೋರ್ಟ್ ಕಾರ್ಡ್ ಕೊಡುವ ಕಾರಣಕ್ಕೆ ಜನೋತ್ಸವ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಜನೋತ್ಸವ ಕಾರ್ಯಕ್ರಮ ಬಗ್ಗೆ ಕಾಂಗ್ರೆಸ್ ಪಕ್ಷ ಭ್ರಷ್ಟೋತ್ಸವ ಎಂಬ ಟೀಕೆ ಮಾಡಿದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ನೋವೋತ್ಸವವಾಗಿದೆ. ಈ ಹಿಂದೆ ಕಾಂಗ್ರೆಸ್ ಅವಧಿಯ 2013ರಿಂದ 2018ರ ವರೆಗೂ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಇತ್ತು. ಅನ್ನಭಾಗ್ಯ ಯೋಜನೆ, ಮಕ್ಕಳ ದಿಂಬು ಖರೀದಿಯಲ್ಲೂ ಭ್ರಷ್ಟಾಚಾರ ನಡೆದಿತ್ತು. ಲೋಕಯುಕ್ತ ಬಂದ್ ಮಾಡಿ ಎಸಿಬಿ ತಂದರು ಎಂದು ಟೀಕಿಸಿದರು.
ಇದನ್ನೂ ಓದಿ:ಕರ್ನಾಟಕದಲ್ಲಿ ಯಾವತ್ತೂ ಮುಸ್ಲಿಮರಿಗೆ ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ: ರೇಣುಕಾಚಾರ್ಯ