ಕರ್ನಾಟಕ

karnataka

ETV Bharat / state

'ನಾನು ಸತ್ರೂ ಪರ್ವಾಗಿಲ್ಲ, ಕೊರೊನಾ ಲಸಿಕೆ ಮಾತ್ರ ಬೇಡ'

ಕೊರೊನಾ ತೀವ್ರತೆ ತಡೆಯುವ ಉದ್ದೇಶದಿಂದ 'ವೈದ್ಯರ ನಡೆ ಹಳ್ಳಿ ಕಡೆ' ಎಂಬ ಕಾರ್ಯಕ್ರಮದ ಮೂಲಕ ಮನೆ ಮನೆಗೆ ಹೋಗಿ ಜನರ ಮನವೊಲಿಸಿ ಲಸಿಕೆ ನೀಡಲಾಗುತ್ತಿದೆ. ಆದರೂ, ಕೆಲವೆಡೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ..

vaccine
ಆರೋಗ್ಯ ಸಿಬ್ಬಂದಿಗೆ ಅವಾಜ್ ಹಾಕಿದ ವೃದ್ಧ

By

Published : Jan 23, 2022, 2:18 PM IST

ದೇವನಹಳ್ಳಿ: ವೃದ್ಧರೊಬ್ಬರು ಲಸಿಕೆ ಹಾಕಬೇಡಿ ಎಂದು ಆರೋಗ್ಯ ಸಿಬ್ಬಂದಿಗೆ ಆವಾಜ್ ಹಾಕಿರುವ ಘಟನೆದೇವನಹಳ್ಳಿ ತಾಲೂಕಿನ ರಾಮನಾಥಪುರ ಗ್ರಾಮದಲ್ಲಿ ನಡೆದಿದೆ.

ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಜನರಿಗೆ ಲಸಿಕೆ ಹಾಕುತ್ತಿದ್ದಾರೆ. ಈ ವೇಳೆ ಲಸಿಕೆ ಹಾಕಿಸಿಕೊಳ್ಳಲು ವೃದ್ಧರೊಬ್ಬರು ಹಿಂದೇಟು ಹಾಕಿದ್ದು, ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ.

ಆರೋಗ್ಯ ಸಿಬ್ಬಂದಿಗೆ ಆವಾಜ್ ಹಾಕಿದ ವೃದ್ಧ..

ನಾವು ಮನೆಯಲ್ಲಿರುವವರು, ಇಬ್ಬರಿಗೂ ವಯಸ್ಸಾಗಿದೆ. ಒಂದು ವೇಳೆ ಲಸಿಕೆ ಹಾಕಿಸಿಕೊಂಡು ಆರೋಗ್ಯದಲ್ಲಿ ಏರುಪೇರಾದ್ರೆ ನಮ್ಮನ್ನು ನೋಡಿಕೊಳ್ಳುವವರು ಯಾರು?, ಕೊರೊನಾ ಬಂದು ಸತ್ರೂ ಪರ್ವಾಗಿಲ್ಲ, ಲಸಿಕೆ ಮಾತ್ರ ಹಾಕಿಸಿಕೊಳ್ಳುವುದಿಲ್ಲವೆಂದು ಹಠ ಹಿಡಿದ್ದಾರೆ.

ನೀವು ಲಸಿಕೆ ಹಾಕಿಸಿಕೊಳ್ಳದಿದ್ದರೆ ರೇಷನ್ ಕಟ್ ಮಾಡ್ತೀವಿ ಎಂದಿದ್ದಕ್ಕೆ ನೀವು ರೇಷನ್ ಕಟ್ ಮಾಡಿದ್ರೆ ನಾವು ವೋಟ್ ಹಾಕುವುದಿಲ್ಲ ಎಂದು ಜವಾಬ್ ನೀಡಿದ ವೃದ್ಧ, ಆರೋಗ್ಯ ಸಿಬ್ಬಂದಿ ಮನವೊಲಿಸಿದರೂ ಕೂಡ ಲಸಿಕೆ ಹಾಕಿಕೊಳ್ಳಲಿಲ್ಲ.

ಕೊರೊನಾ ತೀವ್ರತೆ ತಡೆಯುವ ಉದ್ದೇಶದಿಂದ 'ವೈದ್ಯರ ನಡೆ ಹಳ್ಳಿ ಕಡೆ' ಎಂಬ ಕಾರ್ಯಕ್ರಮದ ಮೂಲಕ ಮನೆ ಮನೆಗೆ ಹೋಗಿ ಜನರ ಮನವೊಲಿಸಿ ಲಸಿಕೆ ನೀಡಲಾಗುತ್ತಿದೆ. ಆದರೂ, ಕೆಲವೆಡೆ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details