ನೆಲಮಂಗಲ:ಪಟ್ಟಣದ ಪುರಸಭೆಯ 23 ವಾರ್ಡ್‌ಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಮತದಾನ ಚುರುಕುಗೊಂಡಿದೆ.
23 ವಾರ್ಡ್ಗಳಲ್ಲಿ ವಾರ್ಡ್ ನಂ 2 ರಲ್ಲಿ ಜೆಡಿಎಸ್ ಅಭ್ಯರ್ಥಿ ರಾಜಮ್ಮ ಪಿಳ್ಳಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 22 ವಾರ್ಡ್‌ಗಳಿಗೆ ಮತದಾನ ನಡೆಯುತ್ತಿದೆ. ಮತದಾನದಲ್ಲಿ ಜನರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಉಳಿದ 22 ವಾರ್ಡ್‌ಗಳ ಚುನಾವಣೆಗಾಗಿ 31 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ 11 ಸೂಕ್ಷ್ಮ, 6 ಅತೀ ಸೂಕ್ಷ್ಮ, 6 ಸಾಮಾನ್ಯ ಮತಗಟ್ಟೆಗಳನ್ನಾಗಿ ಗುರುತಿಸಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನೆಲಮಂಗಲ ಪಟ್ಟಣದಲ್ಲಿ ಒಟ್ಟು 14427 ಮಂದಿ ಮಹಿಳಾ, 14477 ಪುರುಷ ಮತದಾರರು ಸೇರಿದಂತೆ 37232 ಜನ ಮತದಾರರಿದ್ದಾರೆ. 22 ಕಾಂಗ್ರೆಸ್, 21 ಬಿಜೆಪಿ, 22 ಜೆಡಿಎಸ್, 01 ಬಿಎಸ್‌ಪಿ, 21 ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮತದಾನ ಪ್ರಕ್ರಿಯೆಗಾಗಿ 132 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.