ದೊಡ್ಡಬಳ್ಳಾಪುರ:ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರದ ಹೊರವಲಯದ ಬೆಟ್ಟಗಳಲ್ಲಿ ವಾಸವಾಗಿದ್ದ ಕೋತಿಗಳನ್ನ ದುಷ್ಕರ್ಮಿಗಳು ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ನಡೆದಿದೆ.
ಪಾಪಿಗಳ ಅಟ್ಟಹಾಸ: ಘಾಟಿ ಸುಬ್ರಮಣ್ಯದಲ್ಲಿ 10ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ! - More than 10 monkeys killed
ತಾಲೂಕಿನ ಘಾಟಿ ಸುಬ್ರಮಣ್ಯ ಕ್ಷೇತ್ರದ ಹೊರವಲಯದ ಬೆಟ್ಟಗಳಲ್ಲಿ ವಾಸವಾಗಿದ್ದ ಕೋತಿಗಳನ್ನ ದುಷ್ಕರ್ಮಿಗಳು ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ನಡೆದಿದೆ.
ಪಾಪಿಗಳ ಅಟ್ಟಹಾಸ: ಘಾಟಿ ಸುಬ್ರಮಣ್ಯದಲ್ಲಿ 10ಕ್ಕೂ ಹೆಚ್ಚು ಕೋತಿಗಳ ಮಾರಣಹೋಮ!
ಸುಬ್ರಮಣ್ಯ ಕ್ಷೇತ್ರದ ಘಾಟಿ ಸುತ್ತಮುತ್ತಲು ವಾಸವಾಗಿದ್ದ 10ಕ್ಕೂ ಹೆಚ್ಚು ಕೋತಿಗಳನ್ನ ಪಾಪಿಗಳು ಕೊಂದಿದ್ದಾರೆ. ಅಲ್ಲದೇ, ಈ ವೇಳೆ ಹಲವು ಕೋತಿಗಳು ಅಸ್ವಸ್ಥಗೊಂಡಿದ್ದು, ಇವುಗಳಿಗೆ ಸ್ಥಳೀಯ ಯುವಕರು ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ಬಳಿಕ ಮೃತ ಮಂಗಗಳ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಒಟ್ಟಾರೆ, ದೇವರ ಸ್ವರೂಪಿಯಾಗಿರುವ ಕೋತಿಗಳನ್ನು ಹೊಡೆದು ಸಾಯಿಸಿರೋದು ಅನಾಗರೀಕ ಕೃತ್ಯವಾಗಿದ್ದು, ಕೋತಿಗಳ ಸಾವು ಕಂಡ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.