ಹೊಸಕೋಟೆ:ರಾಜ್ಯದಲ್ಲಿ ಎರಡನೇ ಹಂತದ ಕೊರೊನಾ ಅಲೆ ತೀವ್ರವಾಗಿ ವ್ಯಾಪಿಸಿದ್ದು, ಪ್ರತಿದಿನ ಸಾವಿರಾರು ಕೇಸ್ ದಾಖಲಾಗುತ್ತಿವೆ. ಮಹಾಮಾರಿ ಹತೋಟಿಗೆ ತರಲು ರಾಜ್ಯ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದೆ. ಇಷ್ಟಾದರೂ ಸೋಂಕು ಕಡಿಮೆಯಾಗುತ್ತಿಲ್ಲ. ಇಂತಹ ಸಮಯದಲ್ಲಿ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಜನರ ಸಹಾಯಕ್ಕೆ ನಿಂತಿದ್ದಾರೆ.
ವಿದೇಶಗಳಿಂದ ಉನ್ನತ ಮಟ್ಟದ ವೈದ್ಯಕೀಯ ಉಪಕರಣ ಆಮದು ಮಾಡಿಕೊಂಡು ಖಾಸಗಿ ಆಸ್ಪತ್ರೆಗೆ ಉಚಿತವಾಗಿ ನೀಡಿದ್ದಾರೆ. ತಾಲ್ಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಹೀಗಾಗಿ ಶಾಸಕರು 30 ಲಕ್ಷ ರೂ. ಸ್ವಂತ ಹಣ ಖರ್ಚು ಮಾಡಿ ಸಿಎಸ್ಆರ್ ಫಂಡ್ ಮೂಲಕ ನ್ಯೂಜಿಲ್ಯಾಂಡ್ ಮತ್ತು ಬಾಂಬೆಯಿಂದ ಬಿಪಾಪ್ ಆಕ್ಸಿಜನ್ ಯಂತ್ರ, ಎಚ್ಎಫ್ಎನ್ಸಿ (High flow nasal Cannula) ಯಂತ್ರಗಳನ್ನ ತರಿಸಿ ಹೊಸಕೋಟೆಯ ಎಂವಿಜೆ ಆಸ್ಪತ್ರೆ, ಸಿಲಿಕಾನ್ ಸಿಟಿ, ಕೆಂಪಣ್ಣ ಸೂಪರ್ ಸ್ಪೆಷಾಲಿಟಿ, ಶ್ರೀನಿವಾಸ ನರ್ಸಿಂಗ್ ಹೋಮ್, ಈಸ್ಟ್ ಪಾಯಿಂಟ್ ಮತ್ತು ಸಾರ್ವಜನಿಕ ಆಸ್ಪತ್ರೆಗಳಿಗೆ ಉಚಿತವಾಗಿ ನೀಡಿದ್ದಾರೆ.