ನೆಲಮಂಗಲ :ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಮಂಜುನಾಥ್ ಇಂದು ಬೆಳ್ಳಂಬೆಳಗ್ಗೆಯೇ ಬಿಎಂಟಿಸಿ ಬಸ್ ಏರಿ ಕ್ಷೇತ್ರದ ಜನರ ಸಮಸ್ಯೆ ಆಲಿಸಿದರು. ತಮ್ಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಬಾಗಲುಕುಂಟೆ, ಚಿಕ್ಕಬಾಣವಾರ ವಾರ್ಡ್ಗಳಿಗೆ ಭೇಟಿ ಕೊಟ್ಟು ಜನರ ಮನವಿಗೆ ಸ್ಪಂದಿಸಿದರು.
ಜನರ ಸಮಸ್ಯೆ ಆಲಿಸಲು ಬಿಎಂಟಿಸಿ ಬಸ್ ಏರಿದ ಶಾಸಕ - constituency
ವಾರ್ಡ್ ವಿಸಿಟ್ ಮಾಡಿದ ಶಾಸಕರೊಬ್ಬರು ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸಿ ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದರು.
ಜನರ ಸಮಸ್ಯೆ ಆಲಿಸಲು ಬಿಎಂಟಿಸಿ ಬಸ್ ಏರಿದ ಶಾಸಕ
ಜೊತೆಗೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೂ ಭೇಟಿ ನೀಡಿದ ಶಾಸಕರು ಚರಂಡಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿಯಾಗದೇ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಕೆಲವು ಭಾಗಗಳಲ್ಲಿ ರಸ್ತೆ ನಿರ್ಮಾಣವಾಗಿಲ್ಲ. ಇನ್ನು ಅಲ್ಲಲ್ಲಿ ಗುಂಡಿಗಳಾಗಿದ್ದು ರಸ್ತೆಗಳಿಗೆ ಡಾಂಬರೀಕರಣ ಮಾಡುವಂತೆ ಶಾಸಕರಿಗೆ ಸಾರ್ವಜನಿಕರು ಮನವಿ ಮಾಡಿದರು.