ಬೆಂಗಳೂರು:ಹಲವು ದಿನಗಳಿಂದ ಕಾಣೆಯಾಗಿದ್ದ ಯುವಕ ಇಂದು ಶವವಾಗಿ ಪತ್ತೆಯಾಗಿದ್ದಾನೆ.
ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ... ಕೊಲೆ ಶಂಕೆ - ಶವ
ಮೂರು ದಿನದ ಹಿಂದೆ ಕಾಣೆಯಾದ ಪ್ರಕರಣ ವಿಜಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇಂದು ಪಟ್ಟಣದ ಕೋಲಾರ ರಸ್ತೆಯ ಬೈಕ್ ಶೋ ರೂಂ ಕಟ್ಟಡದ ಮೇಲೆ ಶವ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗುತ್ತಿದೆ.
ಕೊಲೆ ಶಂಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಅನುಮಾನಸ್ಪದ ರೀತಿಯಲ್ಲಿ ಶವ ಪತ್ತೆಯಾಗಿದ್ದು, ವಿಜಯಪುರ ನಿವಾಸಿ ಪ್ರತಾಪ್ (25) ಎಂದು ಗುರುತಿಸಲಾಗಿದೆ.
ಮೂರು ದಿನದ ಹಿಂದೆ ಕಾಣೆಯಾದ ಪ್ರಕರಣ ವಿಜಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಇಂದು ಪಟ್ಟಣದ ಕೋಲಾರ ರಸ್ತೆಯ ಬೈಕ್ ಶೋ ರೂಂ ಕಟ್ಟಡದ ಮೇಲೆ ಶವ ಪತ್ತೆಯಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗುತ್ತಿದೆ. ಇನ್ನು ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಲಾಗಿದ್ದು, ವಿಜಯಪುರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.