ಕರ್ನಾಟಕ

karnataka

ETV Bharat / state

ಕೋವಿಡ್ ಡ್ಯೂಟಿ ವೇಳೆ ಅಧಿಕಾರಿಗಳು, ವೈದ್ಯರು ನಿರ್ಲಕ್ಷ್ಯ ತೋರಿದರೆ ಅಮಾನತು: ಸಚಿವ ಬೈರತಿ ಬಸವರಾಜ್ - Minister Bairati Basavaraj news

ಒಂದು ವಾರ್ಡ್​ನಲ್ಲಿ ಪ್ರತಿ ದಿನ ಕನಿಷ್ಟ 150 ಸ್ವಾಬ್​ ಟೆಸ್ಟ್ ಮಾಡಬೇಕು. ಪಾಸಿಟಿವ್ ಬಂದ ಅರ್ಧ ಗಂಟೆಯಲ್ಲಿ ರೋಗಿಗೆ ಬೆಡ್ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರಬಾರದು. ಜನರ ಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಿಳಿಸಿದರು.

ಸಚಿವ ಬೈರತಿ ಬಸವರಾಜ್
ಸಚಿವ ಬೈರತಿ ಬಸವರಾಜ್

By

Published : Aug 8, 2020, 6:18 PM IST

ಮಹದೇವಪುರ: ಕೋವಿಡ್-19 ಸೋಂಕು ಹಿನ್ನೆಲೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿ, ವೈದ್ಯರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಮಾತನಾಡಿದ ಸಚಿವರು, ಕೋವಿಡ್ ಡ್ಯೂಟಿಯಲ್ಲಿ ಯಾವುದೇ ಅಧಿಕಾರಿಗಳು ಅಥವಾ ವೈದ್ಯರು ನಿರ್ಲಕ್ಷ್ಯ ತೋರಿದರೆ ಕೂಡಲೆ ಅಮಾನತುಗೊಳಿಸಿ. ಕೊರೊನಾ ಸೋಂಕಿತರಾಗಲಿ, ಪ್ರೈಮರಿ ಕಾಂಟ್ಯಾಕ್ಟ​ಗಳಾಗಲಿ ರಸ್ತೆಗಿಳಿದರೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.

ಪ್ರಗತಿ ಪರಿಶೀಲನಾ ಸಭೆ

ಒಂದು ವಾರ್ಡ್​ನಲ್ಲಿ ಪ್ರತಿ ದಿನ ಕನಿಷ್ಟ 150 ಸ್ವಾಬ್​ ಟೆಸ್ಟ್​ ಮಾಡಬೇಕು. ಪಾಸಿಟಿವ್ ಬಂದ ಅರ್ಧ ಗಂಟೆಯಲ್ಲಿ ರೋಗಿಗೆ ಬೆಡ್ ವ್ಯವಸ್ಥೆ ಮಾಡಬೇಕು. ಸಾರ್ವಜನಿಕರಿಂದ ಯಾವುದೇ ದೂರುಗಳು ಬರಬಾರದು. ಜನರ ಕಷ್ಟಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು ಎಂದು ತಿಳಿಸಿದರು.

ದೊಡ್ಡನಕ್ಕುಂದಿ, ರಾಮಮೂರ್ತಿ ನಗರ, ಬೆಳ್ಳಂದೂರು ಸೇರಿದಂತೆ ಹಲವೆಡೆ ವೈದ್ಯರು ಸ್ಥಳೀಯ ಪಾಲಿಕೆ ಸದಸ್ಯರೊಂದಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಪಾಲಿಕೆ ಸದಸ್ಯರು ಹೇಳಿದರು. ಇದಕ್ಕೆ ಸ್ಪಂದಿಸಿದ ಸಚಿವರು, ಅಂತಹ ಅಧಿಕಾರಿಗಳ ವಿರುದ್ಧ ಕೂಡಲೆ ಕ್ರಮ ತೆಗೆದುಕೊಳ್ಳಲು ಆದೇಶಿಸಿದರು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಿರಬೇಕು. ನಾನು ಯಾರಿಗೂ ತಿಳಿಯದಂತೆ ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ಆ ಸಮಯದಲ್ಲಿ ಯಾರು ಕೆಲಸಕ್ಕೆ ಸರಿಯಾಗಿ ಬರುವುದಿಲ್ಲವೋ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದರು.

ಮಾರತ್​ಹಳ್ಳಿ ವಾರ್ಡ್ ಪಾಲಿಕೆ ಸದಸ್ಯ ರಮೇಶ್ ಮಾತನಾಡಿ ಪಾಸಿಟಿವ್ ಬಂದ ಕುಟುಂಬಕ್ಕೆ ಸರ್ಕಾರ ಕೊಡುತ್ತಿರುವ ದಿನಸಿ ಸಾಕಗುತ್ತಿಲ್ಲ. ಅಧಿಕಾರಿಗಳು ಅವರನ್ನು ಹೊರಕ್ಕೆ ಬಿಡುತ್ತಿಲ್ಲ. ಅದರಿಂದ ಊಟದ ಸಮಸ್ಯೆ ಎದುರಾಗಿದ್ದು, ಅವರಿಗೆ ಹೆಚ್ಚುವರಿ ದಿನಸಿ ಕೊಡುವಂತೆ ಮನವಿ ಮಾಡಿದರು.

ಕೆಲವು ವಾರ್ಡ್​ಗಳಲ್ಲಿ ಕಳೆದ ವಾರಕ್ಕಿಂತ ಈ ವಾರ ಪ್ರಕರಣಗಳು ಕಡಿಮೆ ಆಗಿವೆ. ಕೆಲವು ವಾರ್ಡ್​ಗಳಲ್ಲಿ ಹೆಚ್ಚಾಗಿವೆ. ಅಂತಹ ವಾರ್ಡ್​ಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ. ಮಹದೇವಪುರದ ಎಲ್ಲಾ ವಾರ್ಡ್ ಹಾಗೂ ಪಂಚಾಯಿತಿಗಳಲ್ಲಿ ಎಲ್ಲರಿಗೂ ಸ್ವಾಬ್ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ರೋಗ ಹರಡುವುದು ಕಡಿಮೆ ಆಗುತ್ತಿದೆ. ಕೆಲವು ತಿಂಗಳಲ್ಲಿ ಕೊರೊನಾ ಮುಕ್ತ ವಲಯ ಮಾಡಲು ಶ್ರಮಿಸುವುದಾಗಿ ತಿಳಿಸಿದರು.

ABOUT THE AUTHOR

...view details