ಕರ್ನಾಟಕ

karnataka

ETV Bharat / state

ಆತಂಕ ಸೃಷ್ಟಿಸಿದ್ದ ಮೆಜೆಸ್ಟಿಕ್ ಘಟನೆ: ಕಮಿಷನರ್​ಗೆ ಡಿಸಿಪಿ ಚನ್ನಣ್ಣವರ್ ಬರೆದಿರುವ​ ಪತ್ರದಲ್ಲೇನಿದೆ?

ಇತ್ತೀಚೆಗೆ ಅನುಮಾನಾಸ್ಪದ ವ್ಯಕ್ತಿ ಮೆಟಲ್​ ಡಿಟೆಕ್ಟರ್​ ಸೌಂಡ್​ ಮಾಡಿದ್ದಕ್ಕೆ ಓಡಿ ಹೋಗಿದ್ದ ವಿಚಾರ ನಗರದಲ್ಲಿ ಆತಂಕ ಮೂಡಿಸಿತ್ತು. ಇದಕ್ಕೆ ಪೊಲೀಸರು ಸ್ಪಷ್ಟನೆ ಸಹ ನೀಡಿದ್ದರು. ಇದೀಗ ಪಶ್ಚಿಮ ವಿಭಾಗದ ಡಿಸಿಪಿ ಚೆನ್ನಣ್ಣವರ್​ ಅವರು ಮೆಜೆಸ್ಟಿಕ್​ ಸುತ್ತಮುತ್ತ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಕುರಿತು ನಗರ ಪೊಲೀಸ್​ ಆಯುಕ್ತ ಸುನೀಲ್​ಕುಮಾರ್​ಗೆ ಪತ್ರ ಬರೆದಿದ್ದಾರೆ.

ರವಿ ಡಿ ಚನ್ನಣ್ಣನವರ್

By

Published : May 15, 2019, 8:58 AM IST

ಬೆಂಗಳೂರು: ಈಸ್ಟರ್​ ಸಂಡೇಯಂದು ಶ್ರೀಲಂಕಾದಲ್ಲಿ ನಡೆದಿದ್ದ ಬಾಂಬ್​ ಸ್ಪೋಟದಿಂದಬೆಂಗಳೂರು ಪೊಲೀಸರುಎಚ್ಚೆತ್ತುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣ​ವರ್​ ಅವರು ನಗರ ಪೊಲೀಸ್​ ಆಯುಕ್ತರಿಗೆ ಭದ್ರತೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದಾರೆ.

ಮೆಜೆಸ್ಟಿಕ್​ ಸುತ್ತಮುತ್ತ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ನಗರ ಪೊಲೀಸ್​ ಆಯುಕ್ತ ಸುನೀಲ್​ಕುಮಾರ್​ ಅವರಿಗೆ ಡಿಸಿಪಿ ಪತ್ರ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ನಗರದಲ್ಲಿರುವ ಚಿಕ್ಕ ಪೇಟೆ ಉಪವಿಭಾಗದ ಉಪ್ಪಾರಪೇಟೆ, ಸಿಟಿ ಮಾರುಕಟ್ಟೆ, ಕಲಾಸಿಪಾಳ್ಯ, ಕಾಟನ್ ಪೇಟೆ, ಚಾಮರಾಜ ಪೇಟೆ ಹಾಗೂ ಕೆಎಸ್ ​ಆರ್​ಟಿ​ಸಿ ಬಸ್​ ನಿಲ್ದಾಣ, ಬಿಎಂಟಿಸಿ ಬಸ್​ ನಿಲ್ದಾಣ, ಮಸೀದಿ, ಚರ್ಚ್, ಮಾಲ್​ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಡಿಸಿಪಿ ಚೆನ್ನಣ್ಣವರ್​ ಮನವಿ ಮಾಡಿದ್ದಾರೆ.

ಮೊನ್ನೆ ತಾನೆ ಬೆಂಗಳೂರಿನ ಮೆಜೆಸ್ಟಿಕ್​ ಮೆಟ್ರೋ ಸ್ಟೇಷನ್​ ಬಳಿ ಅನುಮಾನಾಸ್ಪದ ವ್ಯಕ್ತಿ ಓಡಾಡಿ ಆತಂಕ ಸೃಷ್ಟಿಸಿದ್ದ. ಆದ್ರೆ ಆತನ ಜಾಲ ಪತ್ತೆ ಹಚ್ಚಿದ ಬೆಂಗಳೂರು ಪೊಲೀಸರು ಸಾಜಿದ್​ಖಾನ್ ಎಂದು ಗರುತಿಸಿದ್ದರು. ಅಲ್ಲದೆ, ಆ ವ್ಯಕ್ತಿ ರಾಜಸ್ಥಾನದ ಮೂಲದವನಾಗಿದ್ದು, ಶಹನಾಯಿ ಬಾರಿಸುವ ಕಲಾವಿದ. ಸಾಜಿದ್​ಖಾನ್​ ವಿರುದ್ಧ ಯಾವುದೇ ಕೇಸುಗಳಿಲ್ಲ ಅನ್ನೋ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದರು.

ಶ್ರೀಲಂಕಾದ ಚರ್ಚ್​ನಲ್ಲಿನ ಬಾಂಬ್​ ಸ್ಫೋಟದಂತಹ ಕೃತ್ಯಗಳು ನಗರದಲ್ಲೂ ನಡೆಯಬಾರದು ಎಂದು ಮುನ್ನೆಚ್ಚರಿಕೆಯಾಗಿ ಪೊಲೀಸರು ನಗರದಲ್ಲಿ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ.

ABOUT THE AUTHOR

...view details