ದೇವನಹಳ್ಳಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಲ್ಯಾಪ್ಟಾಪ್ ಬ್ಯಾಗ್ ಇಟ್ಟು ವಾಶ್ ರೂಮ್ಗೆ ಹೋಗಿ ಬರುವಷ್ಟರಲ್ಲಿ ಕಳ್ಳತನವಾಗಿದೆ. ಬ್ಯಾಗ್ ಕಳೆದುಕೊಂಡವರು ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರಿನ ಕೋರಮಂಗಲ ನಿವಾಸಿ ಭವಿತ್ ಗೋಯಲ್ ಎಂಬುವರು ವಿಮಾನ ನಿಲ್ದಾಣದಿಂದ ಚಂಡೀಗಡಕ್ಕೆ ಪ್ರಯಾಣಿಸಬೇಕಿತ್ತು. ಏರ್ಪೋರ್ಟ್ಗೆ ತಡವಾಗಿ ಬಂದು ವಿಮಾನ ತಪ್ಪಿಸಿಕೊಂಡಿದ್ದರು. ಆನಂತರ ಟರ್ಮಿನಲ್ ಹೊರಗಿನ ವಾಶ್ ರೂಮ್ ಬಳಿ ತಮ್ಮ ಲ್ಯಾಪ್ಟಾಪ್ ಇಟ್ಟು ಒಳಗೆ ಹೋಗಿದ್ದರು. ಆದರೆ ವಾಶ್ ರೂಮಿನಿಂದ ಹೊರಗೆ ಬರುವಷ್ಟರಲ್ಲೇ ಬ್ಯಾಗ್ ಮಾಯವಾಗಿದೆ.