ಕರ್ನಾಟಕ

karnataka

ETV Bharat / state

ಸರ್ಕಾರಿ ಶಾಲೆ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿದ ನಟಿ ಪ್ರಣಿತಾ ಸುಭಾಷ್ - ದೊಡ್ಡಬಳ್ಳಾಪುರ ಲೇಟೆಸ್ಟ್​ ನ್ಯೂಸ್

ದೊಡ್ಡಬಳ್ಳಾಪುರ ನಗರದ ಮಾರುಕಟ್ಟೆ ಚೌಕ್​ ಬಳಿಯಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ನಟಿ ಪ್ರಣಿತಾ ಸುಭಾಷ್ ಚಾಲನೆ ನೀಡಿದರು.

Doddaballapur
ಸರ್ಕಾರಿ ಶಾಲೆ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿದ ನಟಿ ಪ್ರಣಿತಾ ಸುಭಾಷ್

By

Published : Jul 29, 2021, 7:00 AM IST

Updated : Jul 29, 2021, 7:14 AM IST

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ):ನಗರದ ಮಾರುಕಟ್ಟೆ ಚೌಕ್​ ಬಳಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕರುನಾಡ ವಿಜಯ ಸೇನೆ ಸಂಘಟನೆ ಕಾರ್ಯೋನ್ಮುಖವಾಗಿದೆ. ಸರ್ಕಾರಿ ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯುವ ಹಾಗೂ ರೇಷನ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ನಟಿ ಪ್ರಣಿತಾ ಸುಭಾಷ್ ಚಾಲನೆ ನೀಡಿದರು.

ಸರ್ಕಾರಿ ಶಾಲೆ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿದ ನಟಿ ಪ್ರಣಿತಾ ಸುಭಾಷ್

ನಂತರ ಮಾತನಾಡಿದ ಪ್ರಣಿತಾ, ಕನ್ನಡಪರ ಸಂಘಟನೆಗಳು ಕನ್ನಡದ ಉಳಿವಿಗಾಗಿ ಶ್ರಮಿಸುತ್ತಿವೆ. ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಪರದಾಡುತ್ತಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳ ಉಳಿವಿಗಾಗಿ ಕನ್ನಡ ಭಾಷೆ, ನೆಲ - ಜಲದ ಸಂರಕ್ಷಣೆಗಾಗಿ ಕರುನಾಡ ವಿಜಯ ಸೇನೆ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಸರ್ಕಾರಿ ಶಾಲೆಗಳ ಪುನಶ್ಚೇತನಗೊಳಿಸುವ ಸಲುವಾಗಿ ಕರುನಾಡ ವಿಜಯ ಸೇನೆ ಸಂಘಟನೆ ರಾಜ್ಯದ ವಿವಿಧೆಡೆ ಶಾಲಾ ಕಟ್ಟಡಗಳಿಗೆ ಸುಣ್ಣ - ಬಣ್ಣ ಹಚ್ಚುವ ಮೂಲಕ ನವೀಕರಣಕ್ಕೆ ಮುಂದಾಗಿದೆ.

ಇದನ್ನೂ ಓದಿ:ಪ್ರಾಣದ ಹಂಗು ತೆರೆದು ಅಪರಣಕ್ಕೊಳಗಾಗಿದ್ದ ಕೇರಳ ವ್ಯಕ್ತಿಯನ್ನು ಕಾಪಾಡಿದ ಹಾಸನ ಪೊಲೀಸರು: ವಿಡಿಯೋ

Last Updated : Jul 29, 2021, 7:14 AM IST

ABOUT THE AUTHOR

...view details