ಕರ್ನಾಟಕ

karnataka

ETV Bharat / state

ಎರಡನೇ ದಿನವೂ ED ಅಧಿಕಾರಿಗಳಿಂದ ನಟಿಮಣಿಯರ ವಿಚಾರಣೆ - Sandalwood drugs case

ಪರಪ್ಪನ‌ ಅಗ್ರಹಾರ ಜೈಲಿನಲ್ಲಿ ನಟಿ ರಾಗಿಣಿ ಹಾಗೂ ಸಂಜನಾ ವಿಚಾರಣೆ ನಡೆಯುತ್ತಿದೆ. ನಿನ್ನೆ ಸುಮಾರು ಮೂರು ಗಂಟೆಗಳ ಕಾಲ‌ ವಿಚಾರಣೆ ನಡೆದಿತ್ತು. ಇಂದೂ ಕೂಡಾ ED ಅಧಿಕಾರಿಗಳು ವಿಚಾರಣೆ ಮುಂದುವರಿಸಿದ್ದಾರೆ.

Ragini, Sanjana
ರಾಗಿಣಿ‌, ಸಂಜನಾ

By

Published : Sep 26, 2020, 3:53 PM IST

ಬೆಂಗಳೂರು:ಎರಡನೇ ದಿನವೂ ಜಾರಿ ನಿರ್ದೇಶನಾಲಯ(ED) ಅಧಿಕಾರಿಗಳಿಂದ ರಾಗಿಣಿ‌ ಹಾಗೂ ಸಂಜನಾರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನ್ಯಾಯಾಲಯದ ಅನುಮತಿ‌ಯಂತೆ ನಿನ್ನೆಯಿಂದ ವಿಚಾರಣೆ ಆರಂಭಗೊಂಡಿದ್ದು, ಇಂದೂ ಮುಂದುವರಿದಿದೆ.

ಪರಪ್ಪನ‌ ಅಗ್ರಹಾರ ಜೈಲಿನಲ್ಲಿಯೇ ನಟಿಯರ ವಿಚಾರಣೆ ನಡೆಯುತ್ತಿದ್ದು, ನಿನ್ನೆ ಸುಮಾರು ಮೂರು ಗಂಟೆಗಳ ಕಾಲ‌ ವಿಚಾರಣೆ ನಡೆದಿತ್ತು. ಬ್ಯಾಂಕ್ ಅಕೌಂಟ್ ಹವಾಲಾ ಅಕ್ರಮ ಹಣಗಳಿಕೆ ವಿಚಾರವಾಗಿ ಪ್ರಶ್ನೆಗಳನ್ನು ನಟಿಯರ ಮುಂದಿಡಲಾಗಿದೆ.

ಡ್ರಗ್ಸ್​ನಲ್ಲಿ ಅಕ್ರಮ ಹಣಗಳಿಸಿದ್ದಾರೆಂದು ಶಂಕಿಸಿ ಪ್ರಶ್ನೆಗಳನ್ನು ಕೇಳಲಾಗಿದೆ. 5 ಜನ ಇ‌ಡಿ ಅಧಿಕಾರಿಗಳಿಂದ ಆಡಳಿತ ಕೊಠಡಿಯ ಬ್ಲಾಕ್​ನ ಮಹಿಳಾ ಬ್ಯಾರಕ್​ನಲ್ಲಿ ರಾಗಿಣಿ ಮತ್ತು ಸಂಜನಾರನ್ನು ಕರೆಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮಹಿಳಾ ಬ್ಯಾರಕ್​ನಲ್ಲಿ ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ ಯಾರಿಗೂ ಪ್ರವೇಶವಿಲ್ಲದ್ದರಿಂದ ನಿಗದಿತ ಆಡಳಿತ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿಚಾರಣೆ ವೇಳೆ ಮಹಿಳಾ ಸಿಬ್ಬಂದಿಯೊಬ್ಬರು ಉಪಸ್ಥಿತರಿರುತ್ತಾರೆ.

ABOUT THE AUTHOR

...view details