ದೊಡ್ಡಬಳ್ಳಾಪುರ: ಡ್ರಗ್ಸ್ ವಿರುದ್ಧ ಸಮರ ಸಾರಿರುವ ದೊಡ್ಡಬಳ್ಳಾಪುರ ಪೊಲೀಸರು ಮಾದಕ ವಸ್ತುಗಳ ಕಳ್ಳಸಾಗಾಣಿಕೆಗೆ ಕಡಿವಾಣ ಹಾಕಲು ವಾಹನಗಳ ತಪಾಸಣೆ ನಡೆಸಿದರು.
ಡ್ರಗ್ಸ್ ವಿರುದ್ಧ ಸಮರ: ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ವಾಹನಗಳ ತಪಾಸಣೆ ಸ್ಯಾಂಡಲ್ ವುಡ್ನಲ್ಲಿ ಡ್ರಗ್ಸ್ ದಂಧೆ ಬೆಳಕಿಗೆ ಬಂದ ಹಿನ್ನೆಲೆ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ನಿರ್ಧಾರಿಸಿದ್ದು, ಡ್ರಗ್ಸ್ ಆಗೈಸ್ಟ್ ವಾರ್ ಕಾರ್ಯಚರಣೆ ನಡೆಸಿದೆ. ಇದರ ಅಂಗವಾಗಿ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸರು ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ವಾಹನಗಳ ತಪಾಸಣೆ ನಡೆಸಿದರು. ನಗರದ ಡೈರಿ ಸರ್ಕಲ್ನಲ್ಲಿ ವಾಹನಗಳ ಡಿಕ್ಕಿ, ಸೀಟ್ ಸೇರಿದಂತೆ ಕೂಲಂಕಷವಾಗಿ ವಾಹನಗಳ ತಪಾಸಣೆ ನಡೆಸಿದರು. ಕಳ್ಳ ಸಾಕಣಿಕೆಯ ಮೂಲಕ ಮಾದಕ ವಸ್ತುಗಳು ವ್ಯಸನಿಗಳ ಕೈ ಸೇರುತ್ತಿರುವ ಹಿನ್ನೆಲೆ ವಾಹನಗಳನ್ನು ತಪಾಸಣೆ ಮಾಡಿದರು. ಇದೇ ಸಮಯದಲ್ಲಿ ಡಿಎಲ್, ಹೆಲ್ಮೆಟ್, ಮಾಸ್ಕ್ ಧರಿಸದ ವಾಹನ ಸವಾರರಿಗೆ ದಂಡ ವಿಧಿಸಿದರು.
ಡ್ರಗ್ಸ್ ವಿರುದ್ಧ ದೊಡ್ಡಬಳ್ಳಾಪುರ ಪೊಲೀಸರ ಸಮರ.. ವಾಹನಗಳ ತಪಾಸಣೆ ಕಾರ್ಯಚರಣೆ ಮುನ್ನ ಮಾದಕ ವಸ್ತು ವಿರುದ್ದ ಸಮರ ಕುರಿತಂತೆ ನಗರದ ನಗರದ ಬಸವ ಭವನದಲ್ಲಿ ಸಭೆ ನಡೆಸಲಾಗಿತ್ತು. ಪೊಲೀಸ್ ಇಲಾಖೆ ಆಯೋಜಿಸಿದ್ದ ಸಭೆಯಲ್ಲಿ ಹೋಟೆಲ್, ಬಾರ್, ರೆಸಾರ್ಟ್, ರೆಸ್ಟೋರೆಂಟ್, ಲಾಡ್ಜ್ ಮಾಲೀಕರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಡಿವೈಎಸ್ಪಿ ಟಿ.ರಂಗಪ್ಪ ಡ್ರಗ್ಸ್ ದಂಧೆ ವಿರುದ್ದ ಕಠಿಣ ಕ್ರಮಕೈಗೊಳ್ಳಲು ಪೊಲೀಸ್ ಇಲಾಖೆ ಸಂಪೂರ್ಣ ಸಿದ್ದವಾಗಿದೆ. ಮಾದಕ ವಸ್ತು ನಿಯಂತ್ರಣಕ್ಕಾಗಿ ಜಾರಿಗೊಳಿಸಲಾಗಿರುವ ಎನ್‌ಡಿಪಿಎಸ್ ಕಾಯಿದೆಯಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸಾಗಣೆ ಮಾಡುವವರಿಗೆ ಶಿಕ್ಷೆಯಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದ್ದು, ನಿಯಂತ್ರಿಸಲು ಮಾದಕ ವಸ್ತುಗಳನ್ನು ಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ಡ್ರಗ್ಸ್ ವಿರುದ್ಧ ದೊಡ್ಡಬಳ್ಳಾಪುರ ಪೊಲೀಸರ ಸಮರ.. ಮಾದಕ ವಸ್ತುಗಳಾದ ಗಾಂಜಾ, ಆಫೀಮ್, ಚರಸ್ ಮತ್ತಿತರ ಪ್ರಜ್ಞೆ ತಪ್ಪಿಸುವಂತಹ ಆರೋಗ್ಯಕ್ಕೆ ಮಾರಕವಾಗುವಂತಹ ಚಟುವಟಿಕೆ ಗಳು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಹಾಗೇನಾದರೂ ಕಾನೂನು ಉಲ್ಲಂಘನೆ ಕಂಡು ಬಂದಲ್ಲಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಬರಲಿರುವ ಹೊಸ ವರ್ಷದ ಆಚರಣೆಗೆ ಸಂಪೂರ್ಣ ನಿಷೇಧವಿರಲಿದೆ. ರೆಸಾರ್ಟ್, ರೆಸ್ಟೋರೆಂಟ್ಗಳು ಯಾವುದೇ ಬುಕಿಂಗ್ ಮತ್ತಿತರ ಚಟುವಟಿಕೆ ನಡೆಸಬಾರದು. ನಂದಿ ವ್ಯಾಪ್ತಿಯಲ್ಲಿ ರೆಸ್ಟಾರ್ಟ್ ಗಳಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿದ್ದು, ಅಲ್ಲಿನ ರೆಸ್ಟೋರೆಂಟ್, ರೆಸಾರ್ಟ್‌ಗಳ ಸಿಸಿ ಟಿವಿ ಆನ್ಲೈನ್ ಸಂಪರ್ಕ ಪೊಲೀಸ್ ಠಾಣೆಗೆ ಕಲ್ಪಿಸಿಕೊಂಡು ನಿಗಾವಹಿಸಲಾಗುವುದು ಎಂದರು.