ನೆಲಮಂಗಲ (ಬೆಂಗಳೂರು ಗ್ರಾಮಾಂತರ):ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯನ್ನು ಕೊಲೆಗೈದ ಘಟನೆ ನೆಲಮಂಗಲ ತಾಲೂಕಿನ ಭೂಸಂದ್ರ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.ವರದಕ್ಷಿಣೆಗಾಗಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಶೃತಿ (29) ಕೊಲೆಯಾದ ದುರ್ದೈವಿ.
ಮನೆಯಲ್ಲಿ ಮಹಿಳೆ ಕೊಲೆ: ವರದಕ್ಷಿಣೆಗಾಗಿ ಪತಿಯಿಂದಲೇ ಕೃತ್ಯ ಶಂಕೆ - ವರದಕ್ಷಿಣೆ
ವರದಕ್ಷಿಣೆಗಾಗಿ ಪತ್ನಿಯನ್ನು ಕೊಲೆಗೈದು ಪತಿ ಪರಾರಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ವರದಕ್ಷಿಣೆಗಾಗಿ ಪತ್ನಿ ಕೊಲೆ
ಮದುವೆಯಾದ ಮೂರು ತಿಂಗಳ ನಂತರ ಪತ್ನಿಗೆ ಪತಿ ಕೃಷ್ಣಮೂರ್ತಿ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನಂತೆ. ತವರಿನಿಂದ ಹಣ ತೆಗೆದುಕೊಂಡು ಬಾರದ ಕಾರಣಕ್ಕೆ ದುಷ್ಕೃತ್ಯ ಎಸಗಿ ಪರಾರಿ ಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತಿಗಾಗಿ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಪತ್ನಿ ಕೊಲೆ.. ಹಳ್ಳದಲ್ಲಿ ಗುಂಡಿ ತೋಡಿ ಗರ್ಭಿಣಿಯ ಕಥೆ ಮುಗಿಸಿದ ಗಂಡ