ದೊಡ್ಡಬಳ್ಳಾಪುರ: ತ್ಯಾಗ ಬಲಿದಾನದ ಸಂದೇಶ ಸಾರುವ ಹಸೇನ್ ಹುಸೇನ್ ಆಚರಣೆಯನ್ನು ದೊಡ್ಡಬಳ್ಳಾಪುರ ನಗರದಲ್ಲಿ ಆಚರಣೆ ಮಾಡಲಾಯಿತು. ಪಶ್ಚಾತ್ತಾಪಕ್ಕಾಗಿ ಶಿಯಾ ಮುಸ್ಲಿಮರು ಬ್ಲೆಡ್, ಕತ್ತಿಯಿಂದ ಎದೆಗೆ ಚುಚ್ಚಿಕೊಳ್ಳುವ ಮೂಲಕ ದೇವರಿಗೆ ಹರಕೆ ತೀರಿಸಿದರು.
ದೊಡ್ಡಬಳ್ಳಾಪುರ: ಶಿಯಾ ಮುಸ್ಲಿಮರಿಂದ ಹಸೇನ್ ಹುಸೇನ್ ಆಚರಣೆ - ಹಸೇನ್ ಹುಸೇನ್ ಸಂಘಟನೆ
ಮೊಹರಂ ನಂತರದ 7ನೇ ದಿನದಲ್ಲಿ ಹಸೇನ್ ಹುಸೇನ್ ಆಚರಣೆಯನ್ನು ಬುಧವಾರ ದೊಡ್ಡಬಳ್ಳಾಪುರದಲ್ಲಿ ಮುಸ್ಲಿಮರು ಆಚರಿಸಿದರು.
ಮುಸ್ಲಿಂ ಬಾಂಧವರಿಂದ ಹಸೇನ್ ಹುಸೇನ್ ಆಚರಣೆ
ನಗರದ ಕಿಲ್ಲಾ ಮಸೀದಿಯಲ್ಲಿ ಆಂಜುಮಾನ್ ಎ ಹೈದರಿ ಸಂಘಟನೆ ಮತ್ತು ಹಸೇನ್ ಹುಸೇನ್ ಸಂಘಟನೆಗಳ ಸಹಭಾಗಿತ್ವದಲ್ಲಿ ಮೊಹರಂ ಶೋಕಾಚರಣೆ ನೆರವೇರಿತು. ಮೊಹರಂ ನಂತರ 7ನೇ ದಿನಕ್ಕೆ ಈ ಆಚರಣೆ ಮಾಡಲಾಗುತ್ತದೆ.
ಇದನ್ನೂ ಓದಿ:ತುಮಕೂರಿನಲ್ಲಿ ಮೊಹರಂ ಆಚರಣೆ: ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ ಶಾಸಕ ಗೌರಿಶಂಕರ್