ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ) : ದುಬೈನಿಂದ ಕೊರಿಯರ್ ಮೂಲಕ ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣವು ಕಸ್ಟಮ್ಸ್ ಇಂಟೆಲಿಜೆನ್ಸ್ ಯೂನಿಟ್ (CIU) ಕಾರ್ಯಾಚರಣೆ ವೇಳೆ ಬೆಳಕಿಗೆ ಬಂದಿದೆ. ಈ ಸಂಬಂಧ ವ್ಯಕ್ತಿಯನ್ನು ಬಂಧಿಸಲಾಗಿದ್ದು, 2.45 ಕೋಟಿ ರೂ. ಮೌಲ್ಯದ 4.72 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.
ನವೆಂಬರ್ 5ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ವಿಭಾಗಕ್ಕೆ ದುಬೈನಿಂದ ಟ್ರೆಡ್ ಮಿಲ್ 5 HP ಯಂತ್ರ ಕೊರಿಯರ್ ಮೂಲಕ ಬಂದಿತ್ತು. ಆದರೆ ಏರ್ ಕಾರ್ಗೋ ಕಮಿಷನ್ರೇಟ್ನ ಕಸ್ಟಮ್ಸ್ ಇಂಟಲಿಜೆನ್ಸ್ ಯೂನಿಟ್ ವಿಭಾಗದ ಅಧಿಕಾರಿಗಳಿಗೆ ಕೊರಿಯರ್ ಕಳಿಸಿದ ಮತ್ತು ತೆಗೆದುಕೊಳ್ಳುವ ವ್ಯಕ್ತಿಯ ಮೇಲೆ ಸಂಶಯವಿತ್ತು. ಬಳಿಕ ಟ್ರೆಡ್ ಮಿಲ್ ಯಂತ್ರ ಸ್ಕ್ಯಾನ್ ಮಾಡಿದಾಗ ಅಕ್ರಮ ಚಿನ್ನ ಸಾಗಾಣಿಕೆ ಬೆಳಕಿಗೆ ಬಂದಿದೆ.