ದೊಡ್ಡಬಳ್ಳಾಪುರ: ತಾಲೂಕಿನ ಮಾಕಳಿ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟ ಪರಿಣಾಮ ಬೆಟ್ಟದಲ್ಲಿನ ಚಿರತೆ ಗ್ರಾಮಕ್ಕೆ ನುಗ್ಗಿ ಮೂರು ಕೋಳಿಗಳನ್ನು ಹೊತ್ತೊಯ್ದಿದೆ.
ಮಾಕಳಿ ಬೆಟ್ಟಕ್ಕೆ ಕಿಡಿಗೇಡಿಗಳಿಂದ ಬೆಂಕಿ: ಗ್ರಾಮಕ್ಕೆ ನುಗ್ಗಿದ ಚಿರತೆ - ಮಾಕಳಿ ಬೆಟ್ಟದಲ್ಲಿ ಬೆಂಕಿ ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟ ಪರಿಣಾಮ ಬೆಟ್ಟದಲ್ಲಿನ ಚಿರತೆ ಗ್ರಾಮಕ್ಕೆ ನುಗ್ಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ತಾಲೂಕಿನ ಮಾಕಳಿ ಬೆಟ್ಟ ಚಾರಣಿಗರ ತಾಣವಾಗಿದ್ದು, ಬೆಟ್ಟದ ಸುತ್ತಲೂ ಅರಣ್ಯ ಪ್ರದೇಶವಿದೆ. ಶುಕ್ರವಾರ ರಾತ್ರಿ 9.30 ರ ಸಮಯದಲ್ಲಿ ಕಿಡಿಗೇಡಿಗಳು ಬೆಟ್ಟಕ್ಕೆ ಬೆಂಕಿ ಇಟ್ಟಿರುವುದು ಕಂಡು ಬಂದಿದೆ. ಇನ್ನು ಬೆಟ್ಟದಲ್ಲಿನ ಹುಲ್ಲು ಒಣಗಿರುವ ಕಾರಣ ತ್ವರಿತಗತಿಯಲ್ಲಿ ಬೆಂಕಿ ವ್ಯಾಪಿಸಿದೆ ಎನ್ನಲಾಗುತ್ತಿದೆ. ಕಿಡಿಗೇಡಿಗಳ ಕೃತ್ಯದಿಂದ ಅಪಾರ ಪ್ರಮಾಣದ ಅರಣ್ಯ, ವನ್ಯಜೀವಿಗಳು ಬೆಂಕಿಗೆ ಆಹುತಿಯಾಗಿದ್ದರೆ, ಮತ್ತೊಂದೆಡೆ ಬೆಟ್ಟದಲ್ಲಿ ಇತ್ತು ಎನ್ನಲಾಗುತ್ತಿದ್ದ ಚಿರತೆ ಬೆಂಕಿಗೆ ಹೆದರಿ ಮಾಕಳಿ ಗ್ರಾಮದ ಬಳಿ ಬೀಡು ಬಿಟ್ಟಿದೆ.
ಇನ್ನು ಶುಕ್ರವಾರ ರಾತ್ರಿ 9.45 ರ ಸಮಯದಲ್ಲಿ ಗ್ರಾಮಕ್ಕೆ ನುಗ್ಗಿ ಮೂರು ಕೋಳಿಗಳನ್ನು ಹೊತ್ತೊಯ್ದಿದ್ದು, ಆತಂಕದಲ್ಲಿದ್ದ ಗ್ರಾಮಸ್ಥರು ರಾತ್ರಿಯಿಡಿ ಪಟಾಕಿ ಹೊಡೆದು, ತಮಟೆ ಸದ್ದು ಮಾಡುತ್ತಾ ಚಿರತೆ ಗ್ರಾಮಕ್ಕೆ ಬರದಂತೆ ಕಾದಿದ್ದಾರೆ.