ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಕುಡಿದು ಬಂದು ನಿತ್ಯ ಕಿರುಕುಳ ಕೊಡುತ್ತಿದ್ದ ಮಗನನ್ನು ತಂದೆಯೊಬ್ಬ ಡಂಬಲ್ಸ್ನಿಂದ ಹೊಡೆದು ಹತ್ಯೆಗೈದಿರುವ ಘಟನೆ ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವಾಲಪುರ ಗ್ರಾಮದಲ್ಲಿ ನಡೆದಿದೆ. ತ್ಯಾಗರಾಜ(38) ತಂದೆಯಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು,ಮುನಿಸ್ವಾಮಿ ಮಗನನ್ನು ಕೊಲೆ ಮಾಡಿದ ಆರೋಪಿ.
ಮೃತ ತ್ಯಾಗರಾಜ ಪ್ರತಿ ನಿತ್ಯ ಕುಡಿದು ಬಂದು ತಂದೆ ಮುನಿಸ್ವಾಮಿ ಜೊತೆ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಇದರಿಂದ ಬೇಸತ್ತ ಮುನಿಸ್ವಾಮಿ ಮಗಳ ಮನೆಗೆ ಬಂದು ಆಶ್ರಯ ಪಡೆದಿದ್ದ. ಬಳಿಕ ಅಲ್ಲಿಗೂ ಬಂದು ಹಣ ಕೊಡುವಂತೆ ಮುನಿಸ್ವಾಮಿ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಇದರಿಂದ ರೋಸಿ ಹೋದ ಮುನಿಸ್ವಾಮಿ ಡಂಬಲ್ಸ್ ನಿಂದ ಹೊಡೆದು ತ್ಯಾಗರಾಜನನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ.