ಆನೇಕಲ್: ಗುಂಡ್ಲುಪೇಟೆಯಲ್ಲಿ ದಲಿತ ಯುವಕನೊಬ್ಬನ ಮೇಲೆ ದಬ್ಬಾಳಿಕೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿಸಿದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನಲೆಯಲ್ಲಿ ಆನೇಕಲ್ನ ಚಂದಾಪುರ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದ ತಮಟೆ ಚಳವಳಿ ಮೂಲಕ ಹೆದ್ದಾರಿ ತಡೆ ಹಿಡಿದು ಆರೋಪಿಗಳನ್ನು ಗಡಿಪಾರಿಗೆ ಆಗ್ರಹಿಸಿತು.
ದಲಿತ ಯುವಕನ ಬೆತ್ತಲೆ ಮೆರವಣಿಗೆ: ಚಂದಾಪುರದಲ್ಲಿ ದಸಂಸ ಪ್ರತಿಭಟನೆ - gundlupet
ಗುಂಡ್ಲುಪೇಟೆಯಲ್ಲಿ ದಲಿತ ಯುವಕನೊಬ್ಬನ ಮೇಲೆ ದಬ್ಬಾಳಿಕೆ ನಡೆಸಿ ಬೆತ್ತಲೆ ಮೆರವಣಿಗೆ ಮಾಡಿಸಿದ ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನಲೆಯಲ್ಲಿ ಆನೇಕಲ್ನ ಚಂದಾಪುರ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದ ತಮಟೆ ಚಳವಳಿ ಮೂಲಕ ಹೆದ್ದಾರಿ ತಡೆ ಹಿಡಿದು ಆರೋಪಿಗಳನ್ನು ಗಡಿಪಾರಿಗೆ ಆಗ್ರಹಿಸಿತು.
ಚಂದಾಪುರದಲ್ಲಿ ದಸಂಸ ಪ್ರತಿಭಟನೆ
ಚಂದಾಪುರ ದಸಂಸ ಆಟೋ ಚಾಲಕರು ಹಾಗು ದಲಿತ ಸಂಘರ್ಷ ಸಮಿತಿ ಪರಿವರ್ತನಾವಾದದ ತಾಲೂಕು ಶಾಖೆ ಮುಖಂಡರು ಹಾಗು ವಿದ್ಯಾರ್ಥಿಗಳ ತಂಡ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ-7ರ ಚಂದಾಪುರ ವೃತ್ತದಲ್ಲಿ ತಮಟೆ ವಾದನದೊಂದಿಗೆ ಕೆಲ ಕಾಲ ಹೆದ್ದಾರಿ ತಡೆದು ಅಸ್ಪೃಶ್ಯತೆ ಆಚರಿಸಿದ ಕ್ರಮವನ್ನು ಖಂಡಿಸಿದರು. ಹಾಗೂ ಅಸ್ಪೃಶ್ಯತೆ ಆಚರಿಸಿದವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.