ಕರ್ನಾಟಕ

karnataka

ETV Bharat / state

ಹೊಸಕೋಟೆಯಲ್ಲಿ ನಾಲ್ವರು ಮನೆಗಳ್ಳರ ಬಂಧನ; ರಾಯಚೂರಿನಲ್ಲಿ ದೇವಸ್ಥಾನದ ಹುಂಡಿ ದೋಚಿ ಖದೀಮರು ಪರಾರಿ - KGF Gang

ಹೊಸಕೋಟೆ ಪೊಲೀಸರು ನಾಲ್ವರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ್ದಾರೆ. ಇನ್ನೊಂದೆಡೆ, ರಾಯಚೂರಲ್ಲಿ ಕಳ್ಳರು ದೇಗುಲದ ಹುಂಡಿ ದೋಚಿದ್ದಾರೆ. ಪ್ರತ್ಯೇಕ ಘಟನೆಗಳ ವರದಿ ಇಲ್ಲಿದೆ.

arrest
ನಾಲ್ವರು ಕುಖ್ಯಾತ ಮನೆಗಳ್ಳರ ಬಂಧನ

By

Published : Jul 16, 2023, 12:23 PM IST

ಆರೋಪಿಗಳ ಬಂಧನದ ಕುರಿತು ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ

ಹೊಸಕೋಟೆ : ಕಳ್ಳತನ ಮಾಡಿ ಶೋಕಿ ಜೀವನ ಮಾಡುತ್ತಿದ್ದ ಹಾಗೂ 15 ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಸರಗಳ್ಳರನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ. ಕಳೆದ ವರ್ಷದಿಂದ ಕೋಲಾರ, ಬೆಂಗಳೂರು ಸೇರಿದಂತೆ ಹಲವೆಡೆ ಮನೆಗಳ್ಳತನ ಪ್ರಕರಣಗಳು ನಡೆದಿದ್ದು, ಆರೋಪಿಗಳ ಬಂಧನಕ್ಕಾಗಿ ವಿಶೇಷ ಪೊಲೀಸ್​ ತಂಡಗಳನ್ನು ರಚನೆ ಮಾಡಲಾಗಿತ್ತು. ಇದೀಗ, ಯಶಸ್ವಿ ಕಾರ್ಯಾಚರಣೆ ನಡೆಸಿರುವ ಹೊಸಕೋಟೆ ಪೊಲೀಸರು ನಾಲ್ವರು ಮನೆಗಳ್ಳರನ್ನು ಸೆರೆ ಹಿಡಿದಿದ್ದಾರೆ.

ಕೆಜಿಎಫ್ ಗ್ಯಾಂಗ್ ಎಂದೇ ಕುಖ್ಯಾತಿ ಗಳಿಸಿದ್ದ ರೌಡಿಶೀಟರ್ ಸುನೀಲ್, ಅರವಿಂದ್, ನಂದಿನಿ ಮತ್ತು ಮೇರಿ ಆವಲಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇವರಿಂದ ಅರ್ಧ ಕೆಜಿಗೂ ಅಧಿಕ ಚಿನ್ನಾಭರಣ, 3 ಕೆಜಿ ಬೆಳ್ಳಿ, 1.5 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ.

ಬೀಗ ಹಾಕಿದ ಮನೆಗಳೇ ಟಾರ್ಗೆಟ್ : ಕಳ್ಳತನ ಮಾಡುವ ಮುನ್ನ ರಾತ್ರಿ ವೇಳೆ ಮನೆಗಳ ಬಳಿ ಬಂದು ಪಹರೆ ನಡೆಸುತ್ತಿದ್ದರು. ಸಂಜೆ ವೇಳೆ ಲೈಟ್ ಹಾಕದೆ ಬೀಗ ಹಾಕಿರುವ‌ ಮನೆಗಳನ್ನು ಟಾರ್ಗೆಟ್ ಮಾಡ್ತಿದ್ದರು. ಲೈಟ್ ಆಫ್ ಮಾಡಿ ಬೀಗ ಹಾಕಿರುವ ಮನೆಗಳಲ್ಲಿ ಯಾರೂ ಇರಲ್ಲ ಎಂಬ ಖಚಿತ ಮಾಹಿತಿ ಮೇರೆಗೆ ಮಧ್ಯರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ, ಹಣ ದೋಚಿ ಪರಾರಿಯಾಗುತ್ತಿದ್ದರು. ಕಳ್ಳತನದಿಂದ ಬಂದ ಹಣದಲ್ಲಿ ಶೋಕಿ ಜೀವನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಹುಂಡಿ ಕಳ್ಳತನ

ದೇವಸ್ಥಾನದ ಹುಂಡಿ ದೋಚಿ ಪರಾರಿ: ದೇವಸ್ಥಾನದ ಹುಂಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಕಳ್ಳರು‌‌ ದೋಚಿ ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಅತ್ತನೂರು ಗ್ರಾಮದಲ್ಲಿ ಜರುಗಿದೆ. 3 ಲಕ್ಷಕ್ಕೂ ಅಧಿಕ ಕಾಣಿಕೆ ಹಣವನ್ನು ದೋಚಲಾಗಿದೆ. ಗ್ರಾಮದ ಆರಾಧ್ಯದೈವ ಶ್ರೀ ದಿಡ್ಡಿ ಬಸವೇಶ್ವರ ದೇವಾಲಯದಲ್ಲಿ ಕಳ್ಳತನ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಿರವಾರ ಠಾಣೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕದಿಯಲು ಬಂದವರನ್ನು ಅಟ್ಟಾಡಿಸಿದ ಗ್ರಾಮಸ್ಥರು :ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು, ಕಳ್ಳತನ ಮಾಡಲು ಬಂದಿದ್ದಾರೆಂದು ಶಂಕಿಸಿ ಗ್ರಾಮಸ್ಥರೇ ಅಟ್ಟಾಡಿಸಿಕೊಂಡು ಹಿಡಿಯಲು ಮುಂದಾದ ಘಟನೆ ಚಾಮರಾಜನಗರ ತಾಲೂಕಿನ ಕೆರೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರು ಬೆನ್ನಟ್ಟಿ ಬರುವುದನ್ನು ನೋಡಿ ಆತಂಕಗೊಂಡ ಮೂವರು ಬೈಕ್​ನಿಂದ ಆಯತಪ್ಪಿ ಬಿದ್ದಿದ್ದು, ಬಳಿಕ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಚಾಮರಾಜನಗರ ಗ್ರಾಮಾಂತರ ಠಾಣಾ ಪೊಲೀಸರು ಬೈಕ್​ ವಶಕ್ಕೆ ಪಡೆದು ಪರಾರಿಯಾದವರ ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ :ನಟ ಮಾಸ್ಟರ್ ಆನಂದ್ ಪುತ್ರಿ ಹೆಸರು ಬಳಸಿ ಮೋಸದ ಆರೋಪ : ಆರೋಪಿ ಮಹಿಳೆ ಬಂಧನ

ಬೈಕ್​ನಲ್ಲಿ ಜಿಂಕೆ ಮಾಂಸ ಸಾಗಾಟ :ಇನ್ನೊಂದೆಡೆ,ಬೈಕ್​ನಲ್ಲಿ ಜಿಂಕೆ ಮಾಂಸ ಸಾಗಾಟ ಮಾಡುತ್ತಿದ್ದ ಘಟನೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗೇಟ್ ಬಳಿ ನಡೆದಿದೆ. ಗುಂಡ್ಲುಪೇಟೆ ಮೂಲದ ಸುರೇಶ್ ಹಾಗೂ ಮಹಮ್ಮದ್ ಸಲೀಂ‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details