ದೊಡ್ಡಬಳ್ಳಾಪುರ: ಪಟಾಕಿ ಚೀಟಿ ಸೇರಿದಂತೆ ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿ, ವ್ಯವಹಾರದಲ್ಲಿ ನಷ್ಟವಾಯಿತೆಂದು ಆತ್ಮಹತ್ಯೆಗೆ ಶರಣಾದ ಘಟನೆ ದೊಡ್ಡಬಳ್ಳಾಪುರದ ಚೈತನ್ಯನಗರದಲ್ಲಿ ನಡೆದಿದೆ.
ಸಾಲಬಾಧೆಗೆ ದಂಪತಿ ಆತ್ಮಹತ್ಯೆ.. ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದರಂತೆ ಮೃತ ಗಂಡ-ಹೆಂಡ್ತಿ - Couple committ suicide
ಪಟಾಕಿ ಚೀಟಿ ಸೇರಿದಂತೆ ಹಲವು ಚೀಟಿ ವ್ಯವಹಾರ ನಡೆಸುತ್ತಿದ್ದ ದಂಪತಿ ವ್ಯಾಪಾರದಲ್ಲಿ ನಷ್ಟವಾಯಿತೆಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ದೊಡ್ಡಬಳ್ಳಾಪುರದ ಚೈತನ್ಯನಗರದಲ್ಲಿ ನಡೆದಿದೆ.
ದಂಪತಿ ಆತ್ಮಹತ್ಯೆ
ಇಲ್ಲಿನ ನಿವಾಸಿಗಳಾದ ರಾಮಮೂರ್ತಿ (49) ವೀಣಾ (45 )ಆತ್ಮಹತ್ಯೆಗೆ ಶರಣಾದ ದಂಪತಿ. ಬೆಳಗಿನ ಜಾವ ಬೆಡ್ ರೂಮ್ನ ಫ್ಯಾನ್ ಕಂಬಿಗೆ ಮತ್ತು ಕಬ್ಬಿಣದ ಹುಕ್ಗೆ ಸೀರೆಯನ್ನು ಕಟ್ಟಿ ನೇಣುಹಾಕಿ ಕೊಳ್ಳುವುದರ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮೃತ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾಗಿರುವ ಸಂಶಯವಿದೆ. ಈ ಸಂಬಂಧ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.