ಕರ್ನಾಟಕ

karnataka

ETV Bharat / state

ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಗು ಸಾವು: ವೈದ್ಯರ ವಿರುದ್ಧ ಪೋಷಕರ ಆಕ್ರೋಶ

ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಗು ಸಾವು - ಆಸ್ಪತ್ರೆ ಎದುರು ಪೋಷಕರು, ಗ್ರಾಮಸ್ಥರ ಪ್ರತಿಭಟನೆ - ವೈದ್ಯರ ನಿರ್ಲಕ್ಷ್ಯ ಆರೋಪ

child-died-in-hospete-hospital-allegations-against-doctors
ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಪೋಷಕರ ಆರೋಪ

By

Published : Mar 9, 2023, 5:15 PM IST

Updated : Mar 9, 2023, 10:58 PM IST

ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಮಗು ಸಾವು: ವೈದ್ಯರ ವಿರುದ್ಧ ಪೋಷಕರ ಆಕ್ರೋಶ

ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಕರೆದುಕೊಂಡು ಬಂದ ಮಗು ವೈದ್ಯರ‌ ನಿರ್ಲಕ್ಷ್ಯದಿಂದ ಸಾವನ್ನಪ್ಪಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಮೃತ ಮಗುವಿನ ಪೋಷಕರು ಹಾಗೂ ಗ್ರಾಮಸ್ಥರು ಇಲ್ಲಿನ ಖಾಸಗಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ತಮ್ಮ ಸಿಟ್ಟು ಹೊರ ಹಾಕಿದ್ದಾರೆ.

ಹೊಸಕೋಟೆ ತಾಲೂಕಿನ ಕಂಬಳಿಪುರ ಗ್ರಾಮದ ವೇಣುಗೋಪಾಲ ಮತ್ತು ಪ್ರಿಯಾಂಕ ದಂಪತಿಯ ಐದು ತಿಂಗಳ ಮಗು ಸಾವನ್ನಪ್ಪಿದೆ. ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿದೆ. 'ಮಗುವಿಗೆ ವಾಂತಿ ಹಾಗೂ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಈ ಸಂಬಂಧ ಮಗುವನ್ನು ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆವು. ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಮಗುವಿಗೆ ಹೊಟ್ಟೆ ನೋವು ಮತ್ತು ವಾಂತಿ ಗುಣಮುಖವಾಗಿಲ್ಲ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.

ಮತ್ತೆ ಮಾರ್ಚ್​ 6ರ ಸೋಮವಾರದಂದು ಆಸ್ಪತ್ರೆಗೆ ಮಗುವನ್ನು ದಾಖಲಿಸಲು ಕರೆದುಕೊಂಡು ಬಂದಿದ್ದೆವು. ಈ ವೇಳೆ, ಆಸ್ಪತ್ರೆಯಲ್ಲಿ ಮಗುವಿಗೆ ಓವರ್ ಡೋಸ್​ ನೀಡಿರುವುದರಿಂದಲೇ ಮಗು ಸಾವನ್ನಪ್ಪಿದೆ. ಆದರೂ‌‌ ಆಸ್ಪತ್ರೆ ಸಿಬ್ಬಂದಿ ಬೇರೆ ಕಡೆ ಕರೆದುಕೊಂಡು ಹೋಗಿ ಮಗುವಿಗೆ ಚಿಕಿತ್ಸೆ ಕೊಡಿಸಿ ಎಂದು ಹೇಳಿದ್ದರು. ಈ ಹಿನ್ನೆಲೆ ಮಗುವನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು‌ ಹೋದಾಗ, ಮಗು ಸಾವನ್ನಪ್ಪಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳಿಕ ಮೃತ ಮಗುವಿನ ಅಂತ್ಯಕ್ರಿಯೆ ನಡೆಸಿದ ಪೋಷಕರು ಇಂದು ಆಸ್ಪತ್ರೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಮೃತ ಮಗುವಿನ ಪೋಷಕರು ಆಸ್ವತ್ರೆಯ ಮೆಡಿಕಲ್ ಬಂದ್ ಮಾಡಿಸಿ ಗಲಾಟೆ ನಡೆಸಿದರು. ಈ ವೇಳೆ, ಆಸ್ವತ್ರೆಯ ಒಳ ಭಾಗದಲ್ಲಿ ನೂಕಾಟ ತಳ್ಳಾ‌ಟ‌ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಭಟನಾಕಾರರ ಮನವೊಲಿಸಲು ಪೊಲೀಸರ ಹರಸಾಹಸಪಟ್ಟರು. ಘಟನೆ ಸಂಬಂಧ ಆಸ್ಪತ್ರೆ ವಿರುದ್ದ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು‌ ದಾಖಲಿಸಿದ್ದಾರೆ.

ಚಿಕಿತ್ಸೆ ನೀಡಿದ ಆಸ್ಪತ್ರೆಯ ಡಾಕ್ಟರ್ ಹೇಳೋದು ಏನು..? : ಆದ್ರೆ ಆಸ್ಪತ್ರೆಯ ವೈದ್ಯರು ತಮ್ಮ ನಿರ್ಲಕ್ಷ್ಯ ಆರೋಪ ತಳ್ಳಿಹಾಕಿದ್ದಾರೆ. ಇನ್ನು ಆಸ್ಪತ್ರೆಯ ವೈದ್ಯ ಅಭಿಷೇಕ್ ಮಾತನಾಡಿ, ಮಗುವಿಗೆ ಅಪರೂಪದ ಮೆಟಬಾಲಿಕ್​ ಕಾಯಿಲೆ ಇತ್ತು. ಈ ಕಾಯಿಲೆಯು ಸುಮಾರು 20 ಸಾವಿರ ಮಕ್ಕಳಲ್ಲಿ ಒಬ್ಬರಿಗೆ ಬರುತ್ತದೆ. ಈ ಕಾಯಿಲೆಯು ಸ್ಕ್ಯಾನಿಂಗ್​ ಅಥವಾ ಹೆರಿಗೆ ಸಮಯದಲ್ಲಿ ತಿಳಿದುಬರುವುದಿಲ್ಲ. ಇನ್ನು ಈ ಮಗುವಿಗೆ ಜೀರ್ಣಕ್ರಿಯೆಯ ಸಮಸ್ಯೆ ಇತ್ತು. ಮಗು ಬಂದ ದಿನ ಆಸ್ಪತ್ರೆಗೆ ದಾಖಲಿಸಿ ರಕ್ತ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ರಕ್ತದಲ್ಲಿ ಆ್ಯಸಿಡ್​ ಮಟ್ಟ ಜಾಸ್ತಿ ಇತ್ತು. ಹೀಗಾಗಿ ಮಗುವಿಗೆ ಎರಡು ಇಂಜೆಕ್ಷನ್​ ನೀಡಿದ್ದೇವೆ. ನಮ್ಮೆಲ್ಲ ಪ್ರಯತ್ನಗಳನ್ನು ನಾವು ಮಾಡಿದ್ದೇವೆ. ಚಿಕಿತ್ಸೆಯಲ್ಲಿ ಯಾವುದೇ ನಿರ್ಲಕ್ಷ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ :ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಹೃದಯಾಘಾತ; ಕುಳಿತ ಸೀಟ್​ನಲ್ಲಿಯೇ ಸಾವು

Last Updated : Mar 9, 2023, 10:58 PM IST

ABOUT THE AUTHOR

...view details