ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ನಡುವೆಯೂ ಅಗತ್ಯ ವಸ್ತುಗಳ ಸರಬರಾಜು ಮಾಡುತ್ತಿದೆ ಸರಕು ವಿಮಾನ - ಕೊರೊನಾ ಇತ್ತೀಚಿನ ಸುದ್ದಿ

ಮಾರ್ಚ್ 22 ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ ಹೇರಲಾಯ್ತು. ಅನಂತರ ದೇಶಿ ವಿಮಾನಗಳ ಹಾರಾಟವನ್ನು ಸಹ ಬಂದ್ ಮಾಡಲಾಗಿತ್ತು.ವೈದ್ಯಕೀಯ ಸಾಮಗ್ರಿಗಳು ಹಾಗೂ ಅಗತ್ಯ ವಸ್ತುಗಳ ಸರಬರಾಜು ಮಾಡುವ ಕಾರ್ಗೋ (ಸರಕು) ವಿಮಾನಗಳ ಹಾರಾಟ ಎಂದಿನಂತೆ ಸಾಗಿದೆ.

ಅಗತ್ಯ ವಸ್ತುಗಳ ಸರಬರಾಜು ಮಾಡುತ್ತಿದೆ ಕಾರ್ಗೋ ವಿಮಾನ
ಅಗತ್ಯ ವಸ್ತುಗಳ ಸರಬರಾಜು ಮಾಡುತ್ತಿದೆ ಕಾರ್ಗೋ ವಿಮಾನ

By

Published : Apr 5, 2020, 3:04 PM IST

ದೇವನಹಳ್ಳಿ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು ಮಾಡಿದೆ . ಆದರೆ ಸರ್ಕಾರದ ಅನತಿಯಂತೆ ಅಗತ್ಯ ವಸ್ತುಗಳ ಸರಬರಾಜು ಮಾಡುವ ಕಾರ್ಗೋ(ಸರಕು) ವಿಮಾನ ಹಾರಾಟ ಎಂದಿನಂತೆ ಹಾರಾಟ ನಡೆಸುತ್ತಿದೆ.

ಮಾರ್ಚ್ 22 ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ಸಂಚಾರಕ್ಕೆ ನಿರ್ಬಂಧ ಹೇರಲಾಯ್ತು. ಅನಂತರ ದೇಶಿ ವಿಮಾನಗಳ ಹಾರಾಟವನ್ನು ಸಹ ಬಂದ್ ಮಾಡಲಾಗಿತ್ತು.

ಸದ್ಯ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ವಿಮಾನ ಹಾರಾಟ ಸ್ಥಗಿತಗೊಂಡಿದ್ದರೂ, ವೈದ್ಯಕೀಯ ಸಾಮಗ್ರಿಗಳು ಹಾಗೂ ಅಗತ್ಯ ವಸ್ತುಗಳ ಸರಬರಾಜು ಮಾಡುವ ಕಾರ್ಗೋ ವಿಮಾನಗಳ ಹಾರಾಟ ಎಂದಿನಂತೆ ಸಾಗಿದೆ. ಅಗತ್ಯ ಸೇವೆಗಳಲ್ಲಿ ತೊಂದರೆಯಾಗದಂತೆ ವಿಮಾನ ನಿಲ್ದಾಣದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ABOUT THE AUTHOR

...view details